Live Stream

[ytplayer id=’22727′]

| Latest Version 8.0.1 |

Local News

ವೃದ್ದಾಶ್ರಮಕ್ಕೆ ಕೆ.ಎಲ್.ಇ ಶಾಲೆಯ ವಿದ್ಯಾರ್ಥಿಗಳ ಭೇಟಿ ಅಜ್ಜ ಅಜ್ಜಿಯಂದಿರಿಗೆ ಪ್ರೀತಿ ವಾತ್ಸಲ್ಯ ನೀಡಿದ ಮಕ್ಕಳು

ವೃದ್ದಾಶ್ರಮಕ್ಕೆ ಕೆ.ಎಲ್.ಇ ಶಾಲೆಯ ವಿದ್ಯಾರ್ಥಿಗಳ ಭೇಟಿ ಅಜ್ಜ ಅಜ್ಜಿಯಂದಿರಿಗೆ ಪ್ರೀತಿ ವಾತ್ಸಲ್ಯ ನೀಡಿದ ಮಕ್ಕಳು

ಬೆಳಗಾವಿ: ನಗರದ ದೆವರಾಜ ಅರಸ್ ಬಡಾವಣೆಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಗೋಕಾಕ ಕೆ.ಎಲ್.ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಹಿರಿಯ ನಾಗರಿಕರೂಂದಿಗೆ ಬೆರೆಯುವ ಮೂಲಕ ಅಜ್ಜ ಅಜ್ಜಿಯಂದಿರಿಗೆ ಮಕ್ಕಳ ಪ್ರೀತಿ ವಾತ್ಸಲ್ಯ ನೀಡಿದರು ಸಂಸ್ಥೆಯ ಚೇರಮನ್ ಡಾ ಪ್ರಭಾಕರ ಕೋರೆಯವರ ಜನ್ಮದಿನ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯದಡಿ ವೃದ್ಧಾಶ್ರಮಕ್ಕೆ ಆಗಮಿಸಿದ್ದರು.

ಶಾಲೆಯ ಪ್ರಾಚಾರ್ಯ ಶ್ರೀಮತಿ ನಂದಾ ಚುನಮುರಿ ಮಾತನಾಡಿ ಡಾ ಕೋರೆಯವರು ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಅವರ ದಾರಿಯಲ್ಲಿ ನಾವು ಮುನ್ನೆಡೆಯ ಬೇಕಾಗಿದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ತುಂಬುವ ಪ್ರಯತ್ನವಾಗಿ ಈ ಭೇಟಿ ಆಯೋಜಿಸಲಾಗಿದೆ ಎಂದರು. ಕೌಟುಂಬಿಕ ಜೀವನದಲ್ಲಿ ಅಜ್ಜ ಅಜ್ಜಿಯರ ಪ್ರೀತಿ ವಾತ್ಸಲ್ಯ ಮಕ್ಕಳಿಗೆ ಅತ್ಯಂತ ಮುಖ್ಯವಾಗಿದ್ದು, ಇಂದಿನ ದಿನಗಳಲ್ಲಿ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳಿಹಿಸುವ ಪ್ರಕರಣ ಹೆಚ್ಚಾಗುತ್ತಿರುವದರಿಂದ ಮಕ್ಕಳು ಹಿರಿಯರ ಪ್ರೀತಿ ಮತ್ತು ಮಾರ್ಗದರ್ಶನದಿಂದ ವಂಚಿತರಾಗುತ್ತಿದ್ದಾರೆAದು ಕಳವಳ ವ್ಯಕ್ತಪಡಿಸಿದರು.

ಸ್ಕೌಟ ಶಿಕ್ಷಕರಾದ ಪ್ರಕಾಶ ಪಾಟೀಲ ಕಬ್ ಮಾಸ್ಟರ್ ಶ್ರೀಮತಿ ಚೇತನಾ ಪಾಟೀಲ ಗೈಡ್ಸ ಶಿಕ್ಷಕರಾದ ಶ್ರೀಮತಿ ಸುಜಾತಾ ತೊಂಡಿಕಟ್ಟಿ ಶ್ರೀಮತಿ ನಂದಾದೀಪಾ ಶಿರಾಳಕರ, ಶ್ರೀ ಶ್ರೀಶೈಲ್ ಕೊಳದುರ್ಗಿ ಆಗಮಿಸಿದ್ದರು. ಇದೊಂದು ಹೃದಯ ಸ್ಪರ್ಶಿ ಕಾರ್ಯಕ್ರಮವಾಗಿತ್ತು. ಮಕ್ಕಳು ಅಜ್ಜ ಅಜ್ಜಿಯರೊಂದಿಗೆ ಬೆರೆತು ಮಾತನಾಡುತಿರುವ ಸನ್ನಿವೇಶ ಎಲ್ಲರ ಮನಕರಗುವಂತಿತ್ತು. ಪ್ರಾರಂಭದಲ್ಲಿ ಸಂಸ್ಥೆಯ ಸಂಯೋಜಕರಾದ ಎಂ.ಎಸ್.ಚೌಗಲಾ ವೃದ್ಧಾಶ್ರಮದ ಕಾರ್ಯಚಟುವಿಕೆಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಕಿರಣ ಚೌಗಲಾ ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";