ಬೆಳಗಾವಿ: ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸನ್ 2024 -25 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇತ್ತೀಚಿಗೆ, ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಲಾಯಿತು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ಕೃಪಾ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದ ಸಿದ್ದರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾ ಪಕರಾದ ಪ್ರೊ. ಎ. ಕೆ. ಪಾಟೀಲ ಸರ್ ರವರು ವಿದ್ಯಾರ್ಥಿ ಒಕ್ಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳ ಸಮಗ್ರ ಪ್ರಗತಿ ಹಾಗೂ ಬೆಳವಣಿಗೆಗೆ ಜ್ಞಾನ, ಕೌಶಲ್ಯ ಹಾಗೂ ಚಾರಿತ್ರ್ಯ ವೇ ಬಹುಮುಖ್ಯ ಹಾಗೂ ಡಾ. ಎಪಿಜಿ ಅಬ್ದುಲ್ ಕಲಾಂ ರವರ ಸಂದೇಶಗಳನ್ನು ಅರಿತು ನಡೆದಾಗ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ನಂತರ ಮುಖ್ಯ ಅತಿಥಿಗಳಿಗೆ ಶಿಕ್ಷಣ ಮಹಾವಿದ್ಯಾಲಯದ ಪರವಾಗಿ ಗೌರವ ಸನ್ಮಾನವನ್ನು ಮಾಡಿ ಮಾತನಾಡಿದ ಪ್ರಾಚಾರ್ಯರು ತಂದೆ ತಾಯಿಯು ಹಾಕಿಕೊಟ್ಟ ಜವಾಬ್ದಾರಿಗಳನ್ನು ಅರಿತು ಶಿಕ್ಷಣ ಪಡೆದರೆ ಮತ್ತು ಮೌಲ್ಯಗಳನ್ನು ಅರಿತು ನಡೆದರೆ ಮುಂದಿನ ಜೀವನ ಸುಖಮಯವಾಗಿ ಸಾಗಲು ಸಾಧ್ಯ ಎಂದು ಪ್ರಶಿಕ್ಷಣಾರ್ಥಿಗಳಿಗೆ ಮನವರಿಕೆ ಮಾಡಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷರಾದ ಶ್ರೀಧರ ಕಿಳ್ಳಿಕೇತರವರು ಎಲ್ಲರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿನಿಯಾದ ಕುಮಾರಿ ಸುಷ್ಮಾ ಮುನವಳ್ಳಿರವರು ವಂದಿಸಿದರು. ಪ್ರಶಿಕ್ಷನಾರ್ಥಿ ಕುಮಾರಿ ಶಿವಕ್ಕ ಜೋಗಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.