ಯಮಕನಮರಡಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೋಟ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಶೇ 86% ದಾಖಲಾಗಿದು ಹುಕ್ಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡದಿದೆ. ಶಾಲೆಗೆ ವೈಶಾಲಿ ಜಾದವ್ ಶೇ 91( ಪ್ರಥಮ) ಗಣಿತದಲ್ಲಿ 100ಕ್ಕೆ 100 ಮರಾಠಿ ಮತ್ತು ಇಂಗ್ಲಿಷದಲ್ಲಿ 100ಕ್ಕೆ 99 ಅಂಕ ಪಡೆದಿದ್ದಾರೆ. ಸರಿತಾ ದೇಸಾಯಿ ಶೇ 88( ದ್ವಿತೀಯ ) ದಿಯಾ ದೇಸಾಯಿ ( ತೃತಿಯ ) ರಷ್ಟು ಅಂಕ ಪಡೆಯುವ ಮೂಲಕ ಪ್ರೌಢಶಾಲೆಗೆ ಕ್ರಮವಾಗಿ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಹಾಗೂ ಶಿಕ್ಷಕ ಮತ್ತು ಪಾಲಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್