ಕೊಟ್ಟೂರು: ದಿನಾಂಕ ೦9-06-2025 ರಂದು ಪಿರ್ಯಾದಾರರಾದ ಕೋಡಿಹಳ್ಳಿ ಮುದ್ದಪ್ಪ ತಂದೆ ಕೋಡಿಹಳ್ಳಿಕೊಟ್ರಪ್ಪ, 33 ವರ್ಷ ಭೋವಿ ಜನಾಂಗ ಕೂಲಿ ಕೆಲಸ ವಾಸ: ಮಲ್ಲನಾಯಕನಹಳ್ಳಿ ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಇವರು ಕೊಟ್ಟೂರು ಪೊಲೀಸ್ ಠಾಣೆಗೆ ಹಾಜರಾಗಿ ಪಿರ್ಯಾದಿಯಾ ಠಾಣೆಗೆ ನೀಡಿದ ದೂರಿನ ಸಾರಂಶ ತನ್ನ ಹೆಂಡತಿಯಾದ ಗಂಗಮ್ಮ ಗಂಡ ಕೋಡಿಹಳ್ಳಿ ಮುದ್ದಪ್ಪ, 30 ವರ್ಷ ಭೋವಿ ಜನಾಂಗ ಕೂಲಿ ಕೆಲಸ ವಾಸ: ಮಲ್ಲನಾಯಕನಹಳ್ಳಿ ಇವರು 26-5-2025 ರಂದು ಬೆಳಿಗ್ಗೆ 8,30 ಗಂಟೆಯಿಂದ 26 -5 2025 ರಂದು ಸಂಜೆ 6,00 ಗಂಟೆ ಮದ್ಯದ ಅವಧಿಯಲ್ಲಿ ನಮ್ಮಮಲ್ಲನಾಯಕನಹಳ್ಳಿ ಗ್ರಾಮದಿಂದ ನಮ್ಮ ಮನೆಯಿಂದ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಇಲ್ಲಿಯವರಿಗೂ ಹುಡಿಕಿದರು ಪತ್ತೆಯಾಗಿರುವುದಿಲ್ಲಾವೆಂದು, ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆಮಾಡುವಂತೆ ಇದ್ದ ದೂರಿನ ಸಾರಂಶದ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ124/2025 ಕಲಂ ಮಹಿಳೆ ಕಾಣೆ ರಿತ್ಯ ಪ್ರಕರಣ ದಾಖಲಿಸಿಕೊಂಡು ಕಾಣೆಯಾದ ಮಹಿಳೆಯನ್ನು ಪತ್ತೆಮಾಡಲು ಪೊಲೀಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆಂದು, ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
ವರದಿ: ಚಿಗಟೇರಿ ಜಯಪ್ಪ ವಿಜಯನಗರ