ಬೆಳಗಾವಿ: ಶಿವಬಸವ ನಗರದ ಶ್ರೀ ಸಿದ್ದರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೃಷ್ಣ ರುಕ್ಮಿಣಿಯರ ವೇಷದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅವರು ದರಿಸಿದ ವೇಷ ಭೂಷಣಕ್ಕೆ ಅನುಗುಣವಾಗಿ ವಿವಿಧ ಸ್ಥಾನಗಳನ್ನು ನೀಡಲಾಯಿತು. ರಾಧಾ ಕೃಷ್ಣ ವೇಷಧಾರಿ ವಿದ್ಯಾರ್ಥಿಗಳಿಗೆ ಕೃಷ್ಣ ನಲ್ಲಿರುವ ಒಳ್ಳೆಯ ಗುಣಗಳನ್ನು ಹಾಗೂ ಧರ್ಮ ಪರಿಪಾಲನೆಯ ಮಹತ್ವವನ್ನು ಅರಿತುಕೊಳ್ಳುವಂತೆ ಶಾಲೆಯ ಪ್ರಾಚಾರ್ಯ ಪ್ರೇಮಲತಾ ಪಾಟೀಲ್ ತಿಳಿ ಹೇಳಿದರು. ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಅಭಿನೇತ್ರಿ ಆರ್. ಶಶಿಕಲಾ ಹುಬ್ಬಳ್ಳಿ, ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಧರ ನೇಮಗೌಡ, ವರ್ಗ ಶಿಕ್ಷಕಿಯರಾದ ಕವಿತಾ, ವೀಣಾ, ಪೂಜಾ ಗಾಣಿಗೇರ ಉಪಸ್ಥಿತರಿದ್ದರು.