ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಕುಮಾರಿ ಶ್ರೀನಿಧಿ ಉಮೇಶ ಆಗೇರ, ಕೊಗ್ರೆ ಬಾಸಗೋಡ ಇವಳು ದ್ವಿತೀಯ ಪಿ. ಯು. ಸಿ ಕಲಾ ವಿಭಾಗದಲ್ಲಿ 93.83% ಅಂಕ ಗಳಿಸಿ ಜಿಲ್ಲೆಗೆ 23 ನೇ ರ್ಯಾಂಕ್ ಗಳಿಸಿದ್ದಾಳೆ.
ಕುಮಾರಿ ಶ್ರೀನಿಧಿ ಆಗೇರ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಸಗೋಡದ ಪೂರ್ವ ವಿದ್ಯಾರ್ಥಿನಿ ಯಾಗಿದ್ದು, ಪ್ರಾಥಮಿಕ ಹಂತದಿಂದಲೂ ಪ್ರತಿಭಾವಂತೆಯಾಗಿದ್ದ ಈಕೆಯು ಇನ್ನು ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡಿ ಚಿಕ್ಕವರಿಗೆ ಮಾದರಿಯಾಗಿ ಶಾಲೆಗೆ, ಊರಿಗೆ ಕೀರ್ತಿ ತರಲಿ ಹಾಗೂ ಅವಳ ಭವಿಷ್ಯ ಉಜ್ವಲವಾಗಲೆಂದು ಮನದುಂಬಿ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, S D M C ಸದಸ್ಯರು ಹಾಗೂ ಸಹಪಾಠಿಗಳು ಹಾರೈಸಿ ಅಭಿನಂದಿಸಿದ್ದಾರೆ.
ಕುಮಾರಿ ಶ್ರೀನಿಧಿ ಆಗೇರ ಇವಳಿಗೆ ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ವತಿಯಿಂದ ಸಹ ಹೃತ್ಪೂರ್ವಕ ಅಭಿನಂದನೆಗಳು