ಬೆಂಗಳೂರು: ವಾರ್ಷಿಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು, 2023-24ನೇ ಸಾಲಿನ ‘ಗೌರವ ಪ್ರಶಸಿ’ ಹಾಗೂ 2022-23 ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಿದೆ.
ಈ ಪ್ರಶಸ್ತಿಗೆ ಒಟ್ಟು 10 ಕೃತಿಗಳು ಪುರಸ್ಕಾರಕ್ಕೆ ಆಯ್ಕೆ ಆಗಿದ್ದು, ಇದರಲ್ಲಿ ನಮ್ಮ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ‘ತೌಲನಿಕ ಧರ್ಮ ದರ್ಶನ’ ಎಂಬ ಅನುವಾದಿತ ಕೃತಿಯೂ ಒಂದಾಗಿದೆ. ಇದರ ಮೂಲ ಲೇಖಕರು, ಯಾಕೂಬ್ ಮಸೀಹ. ಈ ಪುರಸ್ಕಾರಕ್ಕೆ ತಲಾ 25,000 ರೂ ನಗದು ಬಹುಮಾನವನ್ನು ಪ್ರಾಧಿಕಾರ ನಿಗದಿ ಪಡಿಸಿದೆ.
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷದ ಸಂಗತಿ. ಪೂಜ್ಯ ಜಗದ್ಗುರು ಮಹಾಸನ್ನಿಧಿಯವರಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಅನಂತ ಅಭಿನಂದನೆಗಳು.
💐💐