ಅಥಣಿ: ಮತಕ್ಷೇತ್ರದ ಜನವಾಡ ಗ್ರಾಮದಲ್ಲಿ ಹಿಪ್ಪರಗಿ ಡ್ಯಾಂನಿಂದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿಯ ಶಾಸಕರಾದ ಲಕ್ಷ್ಮಣ ಸವದಿಯವರು ಉದ್ಘಾಟಿಸಿ ಗ್ರಾಮದ ಜನರಿಗೆ ಸಂಚರಿಸಲು ಅನುಕೂಲ ಮಾಡಿಕೊಟ್ಟರು ಹಾಗೂ 200.00 ಲಕ್ಷ,ರೂ,ಗಳಲ್ಲಿ ಝೀರೋ ಪಾಯಂಟ್ ನಿಂದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎತ್ತರಿಸುವುದು ಹಾಗೂ ರಸ್ತೆ ಸುಧಾರಣೆಯ ಭೂಮಿ ಪೂಜೆಯನ್ನು ಮಾಜಿ ಉಪಮುಖ್ಯಮಂತ್ರಿಗಳು ಅಥಣಿಯ ಶಾಸಕರಾದ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಂಕರ ನೆಮಗೌಡ, ಹಣಮಂತ ಗೂಗವಾಡ, ಅರ್ಜುನ ಗುರವ, ಎಂ,ಡಿ,ಕಮಲಾನ್ನವರ, ಬಸಪ್ಪ ಯಲಶೆಟ್ಟಿ, ಕುಮಾರ ಗುರವ, ಜಡೇಪ್ಪ ಕುಂಬಾರ, ಗುತ್ತಿಗೆದಾರರಾದ ಮಟಗಾರ ಹಾಗೂ ಯಲ್ಲಪ್ಪ ಪ್ರವೀಣ ಹುಣಸಿಕಟ್ಟಿ (EE HBC) ಹಣಮಂತ ಯಲಶೆಟ್ಟಿ ಹಾಗೂ ಗ್ರಾಮದ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.