ಪ್ರೀತಿಯ 10ನೇ ವಿದ್ಯಾರ್ಥಿಗಳೇ,
ALL THE BEST……
◆ ಆತಂಕ ಬೇಡ,ಆತ್ಮವಿಶ್ವಾಸ ಇರಲಿ…
ದಿನಾಂಕ 21 /03 /2025 ಶುಕ್ರವಾರದಿಂದ ನಿಮ್ಮ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ.
ಜೂನ್ ನಿಂದ ಇಲ್ಲಿಯವರೆಗೂ ನೀವು ಉತ್ತಮ ತಯಾರಿ ಮಾಡಿಕೊಂಡಿರುತ್ತೀರಿ. ಶಾಲೆಯಲ್ಲಿ ಶಿಕ್ಷಕರು ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಿರುತ್ತಾರೆ.ಕ್ರಮಬದ್ಧವಾಗಿ ಅಭ್ಯಾಸ ಮಾಡಿರುತ್ತೀರಿ.
ಅದನ್ನೆಲ್ಲ ಈಗ ಸರಿಯಾಗಿ ಬಳಸಿಕೊಂಡು ಉತ್ತಮ ಅಂಕ ಗಳಿಸಬೇಕು.
ಹಾಗಾದರೆ ಪರೀಕ್ಷೆಯ ಕೊನೆಯ ತಯಾರಿ ಹೀಗಿರಲಿ…
■ ಆತ್ಮವಿಶ್ವಾಸದಿಂದ ಇರಿ.
ಶಾಲೆಯಲ್ಲಿ ಈಗಾಗಲೇ ನೀಡಿದ ಹಾಲ್ ಟಿಕೆಟ್ ನ್ನು ಚೆನ್ನಾಗಿ ಪರಿಶೀಲಿಸಿ ಪರೀಕ್ಷಾ ಸ್ಥಳ,ಸಮಯ,ಕೇಂದ್ರದ ಹೆಸರು ಮುಂತಾದ ಮಹತ್ವದ ಅಂಶಗಳನ್ನು ನೋಡಿಕೊಳ್ಳಿ
■ ನೀವು ಪರೀಕ್ಷೆಗಾಗಿ ಈಗಾಗಲೇ ಬಳಸಿದ,ಚೆನ್ನಾಗಿ ಮೂಡುವ ಪೆನ್ನುಗಳನ್ನೇ ಬಳಸಿ.
ಹೊಸ ಪೆನ್ನಿನ ಬಳಕೆ ಬೇಡ.
■ ಪೆನ್ನು, ಪೆನ್ಸಿಲ್, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಬೇಕಾದ ವಸ್ತುಗಳನ್ನು ನೀವೇ ಸರಿಯಾಗಿ ಒಯ್ಯಬೇಕು.ಅಲ್ಲಿ ಮತ್ತೊಬ್ಬರನ್ನು ಕೇಳಬೇಡಿ.
■ ಕ್ಯಾಮೆರಾ ಮುಂದೆ ಪರೀಕ್ಷೆ ಬರೆಯುತ್ತಿರುವುದರಿಂದ ಗಂಭೀರತೆ ಇರಲಿ.ಪರೀಕ್ಷಾ ಕೇಂದ್ರದ ನಿಯಮಗಳನ್ನು ಪಾಲಿಸಿರಿ.
■ ನಿಮ್ಮ ಪ್ರತಿ ಚಲನವಲನವೂ ರೆಕಾರ್ಡ್ ಆಗುತ್ತಿರುತ್ತದೆ.
■ ಪರೀಕ್ಷಾ ಹಿಂದಿನ ದಿನ ನಿರಾಳವಾಗಿರಿ.
ಸರಿಯಾಗಿ ನಿದ್ದೆ ಮಾಡಿ.
ರಾತ್ರಿ ನಿದ್ದೆಗೆಡಬೇಡಿ.
■ ಯಾವ ದಿನ,ಯಾವ ವಿಷಯ,ಯಾವ ಸ್ಥಳದಲ್ಲಿ ,ಸಮಯ ಎಲ್ಲವನ್ನೂ ಸರಿಯಾಗಿ ನೋಡಿಕೊಳ್ಳಿ.
■ ಪರೀಕ್ಷಾ ಸ್ಥಳಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪಿ.ನಿಮ್ಮ ನಂಬರ್ ಎಲ್ಲಿದೆ ಎನ್ನುವ ಮಾಹಿತಿಯನ್ನು ಅಲ್ಲಿರುವ ನೋಟಿಸ್ ಬೋರ್ಡ್ ಲ್ಲಿ ತಿಳಿದುಕೊಂಡು ಆರಾಮಾಗಿ ಹೋಗಿ ಕುಳಿತುಕೊಳ್ಳಿ.
■ ಗೊಂದಲ ಬೇಡ
ಹಿಂದಿನ ದಿನವೇ ಪರೀಕ್ಷಾ ಸ್ಥಳಕ್ಕೆ ಹೋಗುವ ವ್ಯವಸ್ಥೆ ಮಾಡಿಕೊಳ್ಳಿ.
■ ಮನೆಯ ಹಿರಿಯರ ಸಹಾಯ ಪಡೆಯಿರಿ.
■ ನಿಮ್ಮ ಶಾಲಾ ಸಮವಸ್ತ್ರ ದಲ್ಲಿಯೇ ಪರೀಕ್ಷೆ ಬರೆಯಿರಿ.
■ಬಿಸಿಲು ತುಂಬಾ ಇರುವದರಿಂದ ಹೆಚ್ಚು ನೀರು ಕುಡಿಯಿರಿ.
■ ಬಿಸಿಲಲ್ಲಿ ಜಾಸ್ತಿ ತಿರುಗಾಟ ಬೇಡ.
◆ಪೆನ್,ಕ್ಲಿಪ್ ಪ್ಯಾಡ್,ಹಾಲ್ ಟಿಕೆಟ್ ಎಲ್ಲವನ್ನೂ ಮುನ್ನಾ ದಿನವೇ ಹೊಂದಿಸಿ ಇಟ್ಟುಕೊಳ್ಳಿ.
ಯಾವುದಕ್ಕೂ ಗೊಂದಲ ಬೇಡ.
■ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ನಿಮ್ಮ ಊರಿಂದ ಎಷ್ಟು ದೂರ ಇದೆ ತಲುಪಲು ಎಷ್ಟು ಸಮಯ ಬೇಕು ಎಂಬುದನ್ನು ಮೊದಲೇ ತಿಳಿದುಕೊಂಡು ಸರಿಯಾದ ವ್ಯವಸ್ಥೆ ಮಾಡಿಕೊಳ್ಳಿ.
■ ಬೈಕ್ ಮೇಲೆ 3-4 ಜನರ ಸವಾರಿ ಬೇಡ.ಅದು ನಿಮಗೆ ಅಪಾಯಕಾರಿ.
■ ಯಾವುದೇ ಗಾಳಿಮಾತಿಗೆ ಕಿವಿಗೊಡಬೇಡಿ.ಯಾವುದೇ ವಿವಾದ,ಜಗಳ ತಗಾದೆ ಮಾಡಬೇಡಿ.
■ ಧೈರ್ಯದಿಂದ ಪರೀಕ್ಷೆ ಎದುರಿಸಿ.
■ ಪರೀಕ್ಷೆ ಅನಿವಾರ್ಯ ವಲ್ಲ. ಆದರೆ ಅವಶ್ಯಕ.
ಪರೀಕ್ಷೆಗೆ ಹೆದರಿ ಜೀವಹಾನಿ ಮಾಡಿಕೊಳ್ಳಬೇಡಿ.
ಯಾವುದೇ ನಿಮ್ಮ ಸಮಸ್ಯೆಗಳಿಗೆ ನಿಮ್ಮ ಶಿಕ್ಷಕರು,ಸ್ನೇಹಿತರು ಪಾಲಕರು ಇಲಾಖೆ ನಿಮ್ಮಂದಿಗಿರುತ್ತದೆ.
■ ಸಾಧ್ಯವಾದರೆ ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ.
■ ಆತ್ಮವಿಶ್ವಾಸ ಹಾಗೂ ಅಚಲ ನಂಬಿಕೆ, ಧೈರ್ಯ ಇವು ನಿಮ್ಮ ಅಸ್ತ್ರಗಳಾಗಲಿ.
■ ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ,ಎಲ್ಲರೂ ಉತ್ತಮ ಫಲಿತಾಂಶ ಪಡೆಯಿರಿ.
ನಿಮ್ಮ ಪ್ರೀತಿಯ ಶಿಕ್ಷಕಿ
ಶ್ರೀಮತಿ ಮೀನಾಕ್ಷಿ ಸೂಡಿ
ಇಂಗ್ಲಿಷ್ ಭಾಷಾ ಶಿಕ್ಷಕಿ, ಸರಕಾರಿ ಪ್ರೌಢಶಾಲೆ
ತುರಕರ ಶಿಗಿಹಳ್ಳಿ, ದೇವಗಾಂವ್, ಕಿತ್ತೂರು.