ಇಂದು ಆಗಸ್ಟ್ 15, 2024 ಅಂಗವಾಗಿ ನಮ್ಮೂರ ಬಾನುಲಿ ಒನ್ಲೈನ್ ನ್ಯೂಸ್ ಪೋರ್ಟಲ್ ಅನ್ನು ಉದ್ಘಾಟನಾ ಸಮಾರಂಭ ಬೆಳಗಾವಿಯ ಭಾರತ ಕಾಲನಿಯಲ್ಲಿ ಜರುಗಿತು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಹಾಲಿಂಗ ಎಸ್. ಚೌಗಲಾ, ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ, ನಮ್ಮೂರ ಬಾನುಲಿ ಆನ್ಲೈನ್ ನ್ಯೂಸ್ ಪೋರ್ಟಲ್ ಗೆ ಚಾಲನೆ ನೀಡಿದರು.
ಈ ವೇಳೆ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಹಾಲಿಂಗ ಎಸ್. ಚೌಗಲಾ, ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ, ಶಾಹೀನ ಹೊಂಬಾಳ, ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ. ಸತ್ಯಕ್ಕ ಗಡ್ಡೆ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ಜಾಕಿ ಚೇತನ. ಕುಲಕರ್ಣಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.