Live Stream

[ytplayer id=’22727′]

| Latest Version 8.0.1 |

Local News

ಹಳಕಟ್ಟಿ ಭವನದಲ್ಲಿ ಯೋಮ ಕಾಯರೆನಿಸಿದ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ

ಹಳಕಟ್ಟಿ ಭವನದಲ್ಲಿ ಯೋಮ ಕಾಯರೆನಿಸಿದ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ


ಬೆಳಗಾವಿ: ದಿ. 23 .03. 2025 ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ನಿವಾಸಿಗಳೇ ಆದ ಧಾರವಾಡದ ತಪೋವನದ ಅನುಭಾವಿ ಶರಣರಾದ ಶ್ರೀ ಸತೀಶ ಸವದಿ ಆವರಿಂದ ಯೋಮಕಾಯ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.

ಅನುಭಾವ ಮಂಟಪದ ದಿವ್ಯವಾದ ರಸಾಯನ ಶಾಲೆಯಲ್ಲಿ ಪ್ರತಿಯೊಂದು ವಿಷಯಗಳು ವೈಜ್ಞಾನಿಕವಾಗಿ ಚರ್ಚಿತವಾಗಿ ವಚನಗಳ ರೂಪವನ್ನು ಪಡೆದು ಹೊರಬರುತ್ತಿದ್ದವು. ಅಂತಹ ದಿವ್ಯ ವೇದಿಕೆಗೆ ಬಯಲನ್ನೇ ತನ್ನ ಬದುಕಾಗಿಸಿದ, ಶೂನ್ಯ ಪೀಠದ ಅಧ್ಯಕ್ಷರಾದ ಅಲ್ಲಮರು ಯೋಗಜೀವಿಗಳು. ಕಾಯವನ್ನು ದರಿಸಿದ್ದರೂ ಅಕಾಯ ಜೀವಿಗಳೂ ಆಗಿದ್ದರು ಎನ್ನುವದನ್ನು ಶರಣರ ಬದುಕಿನ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡುವ ಶೂನ್ಯ ಸಂಪಾದನೆಯ ಹಲವಾರು ಸನ್ನಿವೇಶಗಳನ್ನು ನೆನಪಿಸಿ ಶರಣರಾದ ಸತೀಶ ಸವದಿ ಅವರು ಉಪನ್ಯಾಸ ನೀಡಿದರು.

ಧಾರವಾಡದ ತಪೋವನದ ಪೂಜ್ಯರು ಶೂನ್ಯ ಸಂಪಾದನೆಯ ಕೃತಿಯನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದನ್ನು ಮತ್ತು ಅವರು ಶರಣರನ್ನು ಅಪ್ಪಟ ದೇಶಪ್ರೇಮಿಗಳು ಹಾಗೂ ಪರಿಸರವಾದಿಗಳು ಎಂದು ವರ್ಣಿಸಿರುವ ಸನ್ನಿವೇಶಗಳನ್ನು ಸವದಿ ಅವರು ನೆನಪಿಸಿಕೊಂಡರು. ಶರಣರ ಶಿವಯೋಗ ಪರಿಕಲ್ಪನೆ, ಷಟಸ್ಥಲ ಸಾಧನೆ , ಲಿಂಗಾನುಸಂದಾನ ಇವೆಲ್ಲ ಆದುನಿಕ ವಿಜ್ಞಾನದ ಹಲವಾರು ಸಂಶೋಧನೆಯ ಮೈಲುಗಲ್ಲು ಗಳನ್ನು ಮೀರಿಸುವಂತದ್ದು. 

ಹೀಗೆ ಇಂದಿನ ಉಪನ್ಯಾಸ ವೈವಿಧ್ಯತೆಯಿಂದ ಕೂಡಿತ್ತು. ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಸಂಘಟನೆಯ ಅಧ್ಯಕ್ಷರಾದ ಶರಣ ಈರಣ್ಣ ದೆಯನ್ನವರ ಅವರ ನೇತ್ರತ್ವದಲ್ಲಿ ನೆರವೇರಿದವು. ಶರಣ ಸದಾಶಿವ ದೇವರಮನಿ ಅವರ ಮೂಲಕ ಉಪನ್ಯಾಸಕರೊಂದಿಗೆ ಸಂವಾದ ನೆರವೇರಿತು. ಶರಣರಾದ ಶಂಕರ ಗುಡಸ ಅವರೂ ಕೂಡಾ ಮಾತನಾಡುತ್ತಾ ಅಲ್ಲಮಪ್ರಭುಗಳ ಬದುಕಿಗೆ ಸಂಬಂಧಿತ ಹಲವಾರು ಸನ್ನಿವೇಶಗಳನ್ನು ಸ್ಮರಿಸಿಕೊಂಡರು. ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ಶರಣೆ ಮಹಾದೇವಿ ಅರಳಿ ಆವರ ನೇತ್ರತ್ವದಲ್ಲಿ ನಡೆಯಿತು.ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಸಂಘಟನೆ ಉಪಾಧ್ಯಕ್ಷರಾದ ಶರಣ ಶ್ರೀ ಸಂಗಮೇಶ ಅರಳಿ ಅವರು ನೆರವೇರಿಸಿದರು.

ಲಿಂಗಾಯತ ಸಂಘಟನೆಯ ವತಿಯಿಂದ ಪ್ರಸಾದ ಸೇವೆ ನೆರವೇರಿತು. ಶರಣರಾದ ಸುರೇಶ ನರಗುಂದ ಮತ್ತು ವಿ. ಕೆ ಪಾಟೀಲ ಅವರೂ ಕೂಡಾ ಪ್ರಾರಂಭದಲ್ಲಿ ವಚನ ವಿಶ್ಲೇಷಣೆ ಮಾಡಿದರು.ಎ. ಬಿ. ಜೇವಣಿ, ಜಾನ್ಹವಿ ಘೋರ್ಪಡೆ ,ಸುವರ್ಣ ಗುಡಸ, ಬಸವರಾಜ ಗುರನಗೌಡ್ರು, ಶ್ರೀದೇವಿ ನರಗುಂದ, ಆನಂದ ಕರ್ಕಿ ಅವರಿಂದ ವಚನ ಗಾಯನ ನೆರವೇರಿತು. ಅಶೋಕ ಇಟಗಿ,ಸುಜಾತಾ ಮತ್ತಿಕಟ್ಟಿ, ಶೋಭಾ ಮುನವಳ್ಳಿ, ಕಮಲಾ ಗಣಾಚಾರಿ,ಮಹಾದೇವಿ ಘಾಟೆ,ಶಾಂತಾ ಕ೦ಬಿ, ಜಯಶ್ರೀ ನಷ್ಟೆ,ತಿಗಡಿ ದ೦ಪತಿಗಳು,ಕೆಂಪನ್ನವರ ದಂಪತಿಗಳು, ಬಸವರಾಜ ಬಿಜ್ಜರಗಿ, ಸುದೀಪ ಪಾಟೀಲ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಗಿ, ಸುನೀಲ ಸಾನಿಕೊಪ್ಪ , ಸೋಮಶೇಖರ ಕಟ್ಟಿ , ಒಳಗೊಂಡಂತೆ ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";