ಹುಬ್ಬಳ್ಳಿ: ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ ಆಯೋಜಿಸಿದ ಸೌರ ವಿದ್ಯುತ್ ಶಕ್ತಿ ಅಳವಡಿಕೆ ಸಬ್ಸಿಡಿ ಹಾಗೂ ಘಣ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಕುರಿತು ಉಪನ್ಯಾಸ ನೀಡುತ್ತಾ, ಉಚಿತವಾಗಿ ದೊರೆಯುವ ಸೂರ್ಯ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಶ್ರೀಯುತರು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಸುಸ್ಥಿರ ಜೀವನ ನಡೆಸಬೇಕೆಂದು ಪರಿಸರವಾದಿ ಬಾಲಚಂದ್ರ ಜಾಬಶೆಟ್ಟಿ ಇಂದು ಇಲ್ಲಿ ಹೇಳಿದರು.
ಕೇಂದ್ರ ಸರಕಾರವು ಘೋಷಿಸಿದ “ಸೂರ್ಯ ಘರ” ಯೋಜನೆಯ ಕುರಿತು ವಿವರಿಸಿತ್ತಾ ಪೋಟೋ ವೋಲ್ಟಾಯಿಕ್ ಸೆಲ್ಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಆಗುತ್ತಿರುವ ಸಂಶೋಧನೆ ಹಾಗೂ ಅದರಿಂದಾಗಿ ಮಾಳಿಗೆಯ ಮೇಲೆ ಅಳವಡಿಸುತ್ತಿರುವ ಸೋಲಾರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನಾ ವೆಚ್ಚದಲ್ಲಿ ಗಣನೀಯ ಇಳಿಕೆಯನ್ನು ಗಮನಿಸಬಹುದು. ಜೊತೆಗೆ ಮೂರು ಕಿಲೋ ವ್ಯಾಟ್ ಉತ್ಪಾದನಾ ಘಟಕಗಳಿಗೆ ಸರಕಾರದಿಂದ ರೂ. 78000/-ಗಳ ಸಹಾಯಧನ ಪಡೆಯಬುದೆಂದರು.
ಸೋಲಾರ ಪ್ಯಾನೆಲ್ಗಳ ಗುಣಮಟ್ಟ ಸುಧಾರಣೆಗಳಿಗೆ ನಡೆಯುತ್ತಿರುವ ಸಂಶೋಧನೆ ಕುರಿತು ವಿವರಣೆ ನೀಡುವ ಸಂದರ್ಭದಲ್ಲಿ ಪ್ರಥಮದಲ್ಲಿನ ಪಾಲಿಕ್ರಷ್ಟಲೈನ್, ಮೋನೋಕ್ರಷ್ಟಲೈನ್, ಮನೋಕ್ರಷ್ಣಲೈನ್ ಪರ್ಕ, ಮನೋಕ್ರಷ್ಣಲೈನ್ ಪರ್ಕ ಹಾಫ್ ಕಟ್, ಬೈಫೇಸಿಯಲ್, ಟಾಪ್ ಕಾನ್, ಹಾಗೂ ಎಚ್.ಜೆ.ಟಿ. ಮುಂತಾದ ಸೌರ ಫಲಕಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ವಿವಿಧ ಸೌರಫಲಕಗಳನ್ನು ಅಳವಡಿಸಿ ಉತ್ಪಾದಿಸಬಹುದಾದ ಗರಿಷ್ಟ ವಿದ್ಯುಶಕ್ತಿ ಪ್ರಮಾಣದ ಕುರಿತು ಅಂಕಿ ಸಂಖ್ಯೆಗಳನ್ನಾಧರಿಸಿದ ವಿಷಯ ಮಂಡಿಸಿದರು.
ಸೌರಫಲಕಗಳಿಂದ ಗರಿಷ್ಠ ವಿದ್ಯುತ್ ಉತ್ಪಾದನೆಗಾಗಿ ಅಳವಡಿಸಬಹುದಾದ ಇತರೆ ಉಪಘಟಕಗಳಾದ ಡಿ.ಸಿ.ಡಿ.ಬಿ., ಎ.ಸಿ.ಡಿ.ಬಿ., ಸೋಲಾರ ಇನ್ವೆರ್ಟರ್, ಲೈಟನಿಂಗ್ ಅರಸ್ಟರ್, ರಾಸಾಯನಿಕ ವಿದ್ಯುತ್ ವಾಹಕ ಗುಂಡಿ ಅಳವಡಿಕೆ, ಸ್ಟ್ರಕ್ಟರ್ಗಳ ನಿರ್ಮಾಣ, ನೆಟ್ ಮೀಟರಿಂಗ್ ಹಾಗೂ ಅಳವಡಿಕೆ ಮಾಡಲು ತಗಲುವ ಖರ್ಚು ವೆಚ್ಚಗಳ ಕುರಿತು ವಿವರಿಸಿದರು. ಹೊಸ ತಂತ್ರಜ್ಞಾದಿಂದಾಗಿ ಸೌರಶಕ್ತಿಯನ್ನು ಸುರಕ್ಷತೆಯೊಂದಿಗೆ ಬಳಸಲಾಗುತ್ತಿದೆ ಎಂದು ಶ್ರೀಯುತರು ದೇಶದಲ್ಲಿ ರಾಜಸ್ಥಾನ, ಗುಜರಾತ, ಕರ್ನಾಟಕ, ತಮಿಳನಾಡು, ತೇಲಂಗಾಣ ರಾಜ್ಯಗಳಲ್ಲಿ ಮುಂಚೂಣಿಯಲ್ಲಿಯೇ ಎಂದರು. ಗ್ರಾಹಕರು ದಿನಂಪ್ರತಿ ಉತ್ಪಾದಿಸುವ ಹೆಚ್ಚಿನ ವಿದ್ಯುತ್ನ್ನು ಹೆಸ್ಕಾಂಗೆ ನೀಡಿ ಹಣವನ್ನು ಪಡೆಯುವ ವಿಧಾನವನ್ನು ವಿವರಿಸಿದರು.
ನಾಗರಿಕರು ತ್ಯಾಜ್ಯಗಳನ್ನು ಹಸಿ ಮತ್ತು ಒಣ ತ್ಯಾಜ್ಯಗಳನ್ನಾಗಿ ವಿಗಂಡಿಸಿ, ಮಹಾನಗರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತ್ಯಾಜ್ಯಗಳನ್ನು ಸುಡದೇ ವೈಜ್ಞಾನಿಕವಾಗಿ ಬಳಸಿಕೊಳ್ಳುವ ವಿಧಾನವನ್ನು ತಾಡೆದರು. ತ್ಯಾಜಗಳಿಂದ ರೋಗಗಳು ಹೆಚ್ಚುತ್ತಿದ್ದು, ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವ ವಿಧಾನವನ್ನು ತಿಳಿಸಿದರು.
ಕ್ಲಬ್ ಅಧ್ಯಕ್ಷ ಡಾ. ಬಸವರಾಜ ಸಿ. ಕೋಟಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷರಾದ ಎಂ. ಜಿ. ಸಜ್ಜನರ ಸ್ವಾಗತಿಸಿದರು. ನಿರ್ದೇಶಕರಾದ ಡಾ. ಎಂ. ಐ. ಸಾಂಬ್ರಾಣಿ ಅತಿಥಿಗಳನ್ನು ಪರಿಚಯಿಸಿದರು. ನಿವೃತ್ತ ಶಿಕ್ಷಕ ಎಸ್. ಎಸ್. ಕರಡಿ ಪ್ರಾರ್ಥಿಸಿದರು. ಕಾರ್ಯದರ್ಶಿ ಉಮೇಶ ವಿ. ಪಾಟೀಲ ವಂದಿಸಿದರು. ನಿರ್ದೇಶಕ ಡಾ. ಬಿ. ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ವತಿಯಿಂದ ಶ್ರೀ ಬಾಲಚಂದ್ರ ಜಾಬಶೆಟ್ಟಿ ಮತ್ತು ಜನೇವರಿ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.