ಧಾರವಾಡ -ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಜೈವಿಕ ತಂತ್ರಜ್ಞಾನ ಮತ್ತು ಸೌರ ವಿದ್ಯುತ್ ಶಕ್ತಿ ಉತ್ಪಾದನೆ ತಂತ್ರಜ್ಞಾನಗಳು ಕುರಿತು ಸರಕಾರಿ ಪ್ರೌಢಶಾಲೆ ವೀರಾಪುರದ ಸಹ್ಯಾದ್ರಿ ಪರಿಸರ ಸಂಘದ ಆಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ಮುಖ್ಯಾಧ್ಯಾಪಕಿ ಮಂಗಳಗೌರಿ ಬಡಿಗೇರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಸ್ನೇಹಿ ಜೀವನ ಶೈಲಿ, ವಿಷಮುಕ್ತ ಆಹಾರ ಉತ್ಪಾದನೆ, ಶುದ್ಧ ನೀರು, ಶುದ್ಧ ಗಾಳಿ ದೊರೆಯುವಂತೆ ಇಂದಿನ ಮಕ್ಕಳು ಭಾಷ್ಯ ಬರೆಯಬೇಕಾಗಿದೆ, ಪಾರಂಪರಿಕ ಹಾಗೂ ನಂದಿ ಆಧಾರಿತ ಕೃಷಿಯ ಪುನರುತ್ಥಾನಕ್ಕಾಗಿ ನಾವೆಲ್ಲರೂ ಕಂಕಣ ಬದ್ಧರಾಗಬೇಕಿದೆಯೆಂದು ಖ್ಯಾತ ಪರಿಸರವಾದಿ ಭಾಲಚಂದ್ರ ಜಾಬಶೆಟ್ಟಿಯವರು ನೀಡಿದ ಉಪನ್ಯಾಸದ ಮುಖ್ಯಾಂಶಗಳಲ್ಲೊಂದಾಗಿತ್ತು. ಸೌರ ವಿದ್ಯುಚ್ಛಕ್ತಿ ಉತ್ಪಾದನೆಯಿಂದ ದೊರೆಯುವ ಲಾಭಗಳ ಕುರಿತು ವಿವಿಧ ಆಯಾಮಗಳಲ್ಲಿ ವಿಷಯ ಮಂಡಿಸಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಈರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ವಿಶ್ರಾಂತ ಮುಖ್ಯಾಧ್ಯಾಪಕ ನರೇಗಲ್ಲ ಸರ್ ರವರು ಅತಿಥಿಗಳನ್ನು ಪರಿಚಯಿಸಿದರು, ವಿಜ್ಞಾನ ಶಿಕ್ಷಕಿ ಸ್ಮಿತಾ ವಡಗಾವೆ ಕಾರ್ಯಕ್ರಮ ನಿರೂಪಿಸಿದರು, ಸುರೇಶ ಮುಗಳಿ, ಸುವರ್ಣ ಪಾಟೀಲ, ಹಾಗೂ ಗುರುಬಳಗ ಉಪಸ್ಥಿತರಿದ್ದರು.