ಬಸ್ಸಾಪೂರ: ಸ್ಥಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಬಸ್ಸಾಪೂರನ ವಿದ್ಯಾರ್ಥಿನಿ ಕುಮಾರಿ ಅನುರಾಧಾ ಕಾಳಪ್ಪ ಬಡಿಗೇರ ಇವಳ ಸ್ವರಚಿತ ಕವನ ಸಂಕಲನ ” ನನ್ನಂತರಾಳ ” ಯಮಕನಮರಡಿಯಲ್ಲಿ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ತದ ನಿಮಿತ್ಯ ಇತ್ತೀಚಿಗೆ ಆ ವಿದ್ಯಾರ್ಥಿನಿಗೆ ಅಭಿನಂದನಾ ಸಭೆ ಸ್ಥಳೀಯ ಶಾಲೆಯಲ್ಲಿ ಜರುಗಿತು. ಅನೇಕ ಕನ್ನಡಪರ ಸಂಘಟನೆಗಳು, ಹುಕ್ಕೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು ಹುಕ್ಕೇರಿ, ಶಾಲಾ ಸಿಬ್ಬಂದಿ ಸಹಯೋಗದಲ್ಲಿ ಕುಮಾರಿ ಅನುರಾಧಾ ಕಾಳಪ್ಪ ಬಡಿಗೇರ ಇವಳನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಹುಕ್ಕೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅವಲಕ್ಕಿ ಮಾತನಾಡಿ ಕುಮಾರಿ ಅನುರಾಧಾಳ ಕವನ ಸಂಕಲನ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಆಸಕ್ತಿ ಹೊಂದಿರುವುದು ಅಭಿಮಾನದ ಸಂಗತಿ ಈ ವಿದ್ಯಾರ್ಥಿನಿಯಂತೆ ಇತರೆ ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಸಾಹಿತಿಗಳಾಗಬೇಕು ಕನ್ನಡದ ಸತ್ವ ಸಾಹಿತ್ಯ ವಿಶ್ವಕ್ಕೆ ತಿಳಿಸುವಂತಹ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಂಗ್ಲಿಸಾಬ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭೀಮಶಿ ಕಳ್ಳಿಮನಿ, ಎಸ್. ಡಿ. ಎಮ್.ಸಿ ಅಧ್ಯಕ್ಷರಾದ ಲಕ್ಷ್ಮಿ ಕಾಲಕೊಳವಿ, ಸಮಾಜ ಸೇವಕರಾದ ವಿನೋದ್ ಜಗಜಂಪಿ, ಮಾರುತಿ ಬುಕ್ಕನಟ್ಟಿ, ವಿಠ್ಠಲ ಬುಕ್ಕನಟ್ಟಿ, ರಾಜೇಂದ್ರ ಪಂಗನ್ನವರ, ಜಿ. ವ್ಹಿ. ಮಾ ಳಗಿ, ಶ್ರೀಮಂತ ಪಾಟೀಲ, ಶ್ರೀಮತಿ ಎಸ್ ಎಸ್ ಕಂಕನವಾಡಿ, ಊರಿನ ಪ್ರಮುಖರು ಎಸ್ ಡಿ ಎಂ ಸಿ ಸದಸ್ಯರು ಹಾಜರಿದ್ದರು.
ರಾಜು ತಳವಾರ, ಬಿ.ಡಿ.ಅಂಗಡಿ ಲಲಿತಾ ಮೇತ್ರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ :ಎ. ವೈ. ಸೋನ್ಯಾಗೊಳ