ಬೆಳಗಾವಿ: ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ತಂಡ ಧಾರವಾಡ ನೀರು ಸರಬರಾಜು ನಿಗಮದ ಮುಖ್ಯ ಇಂಜಿನಿಯರ್ ಅಶೋಕ್ ವಸಂತ್ ಅವರ ಬೆಳಗಾವಿಯ ರಾಮತೀರ್ಥನಗರದಲ್ಲಿನ ನಿವಾಸ ಮತ್ತು ಕಚೇರಿಯಲ್ಲಿ ದಾಳಿ ನಡೆಸಿದೆ.
ದಾಳಿಯಲ್ಲಿ ಸುಮಾರು ₹1.5 ಲಕ್ಷ ನಗದು, 2 ಕೆಜಿ ಬೆಳ್ಳಿ ಆಭರಣಗಳು, ಮತ್ತು ಬಂಗಾರ-ಬೆಳ್ಳಿಯ ಪಾತ್ರೆಗಳು (ಕಪ್, ಗ್ಲಾಸ್, ಆರತಿ ತಟ್ಟೆ, ದೀಪ) ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಈ ಆಸ್ತಿ ಮಾದರಿ ಆದಾಯಕ್ಕೆ ಅನುಗುಣವಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ.
ಲೋಕಾಯುಕ್ತ ತಂಡ ಈಗ ಆಶೋಕ್ ವಸಂತ್ ಅವರ ಆಸ್ತಿ ವಿವರಗಳು, ಬ್ಯಾಂಕ್ ಖಾತೆಗಳು ಮತ್ತು ಇತರೆ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಹೆಚ್ಚಿನ ಅನಿಯಮಿತ ಆಸ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ.
ಈ ದಾಳಿಯಿಂದಾಗಿ ಸರ್ಕಾರಿ ಅಧಿಕಾರಿಗಳ ಆಸ್ತಿ ವಿವರಗಳ ಕುರಿತು ಮತ್ತೊಂದು ಭ್ರಷ್ಟಾಚಾರದ ಮಾದರಿ ಬೆಳಕಿಗೆ ಬಂದಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177