ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆಸಿ, ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಕಚೇರಿ ಸೂಪರಿಂಟೆಂಡೆಂಟ್ ಹಾಗೂ ಕಂಪ್ಯೂಟರ್ ಆಪರೇಟರ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಕಚೇರಿ ಸೂಪರಡೆಂಟ್ ಅಬ್ದುಲ್ ವಲಿ ಹಾಗೂ
ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಿಗೇರ ಅವರು ಅಂಗನವಾಡಿ ಸಹಾಕಿಯಿಂದ 15 ಸಾವಿರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಪೊಲೀಸರರು ವಶಕ್ಕೆ ಪಡೆಯುತ್ತಿದಂತೆ ಸೌಮ್ಯಾ ಅವರು ಅಸ್ವಸ್ಥರಾದರು. ಹುಕ್ಕೇರಿ ತಾಲೂಕಿನ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬಳೆ ಅವರು ವರ್ಗಾವಣೆ ಕೇಳಿದಾಗ 30 ಸಾವಿರ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಇಂದು ಪ್ರಥಮವಾಗಿ 15 ಸಾವಿರ ರೂ.ಗಳನ್ನು ಕಚೇರಿಯಲ್ಲಿಯೇ ಪಡೆಯುತ್ತಿದ್ದರು.
ಲೋಕಾಯುಕ್ತ ದಾಳಿ ಮಾಡುತ್ತಿದಂತೆ ಕಂಪ್ಯೂಟರ್ ಆಪರೇಟರ್ ಸೌಮ್ಯಾ ಅವರಲ್ಲಿ ಅಸ್ವಸ್ಥತೆ ಕಂಡು ಬಂದಿದೆ. ತಕ್ಷಣವೇ ಕಚೇರಿಗೆ ವೈದ್ಯರನ್ನ ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.