Live Stream

[ytplayer id=’22727′]

| Latest Version 8.0.1 |

Local News

ಹಳ್ಳಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟ ಮೆಕಿನ್ ಎನರ್ಜಿ ಪ್ರೈವೇಟ್ ಲಿಮಿಟೆಡ್

ಹಳ್ಳಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟ ಮೆಕಿನ್ ಎನರ್ಜಿ ಪ್ರೈವೇಟ್ ಲಿಮಿಟೆಡ್

ದೇವಗಾವ: ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ಮೆಕಿನ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದಿ. ಏಪ್ರಿಲ್ 08,2025 ರಂದು ತನ್ನ ಕಂಪನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಕಾರ್ಯಕ್ರಮ 2024-25ರಡಿಯಲ್ಲಿ ಅಂದಾಜು ರೂ.5 ಲಕ್ಷ ಮೌಲ್ಯದ ವಸ್ತುಗಳನ್ನು ದೇಣಿಗೆ ನೀಡಿದ ಮೂಲಕ ಹಳ್ಳಿ ಶಾಲೆಯ ಅಭಿವೃದ್ಧಿಗೆ ಶ್ರಮಪಟ್ಟಿದೆ.

ಮೆಕಿನ್ ಎನರ್ಜಿ ಸಂಸ್ಥೆಯು ಶಾಲೆಗೆ ಗಣಕಯಂತ್ರಗಳು (ಕಂಪ್ಯೂಟರ್‌ಗಳು), ಶಾಲಾ ಚೀಲಗಳು, ತೂಕ ತೂಕುವ ಯಂತ್ರ, ಗ್ರಂಥಾಲಯ ಬಳಕೆಯ ಪುಸ್ತಕಗಳು, ಹಸಿರು ಫಲಕಗಳು (ಗ್ರೀನ್ ಬೋರ್ಡುಗಳು) ಸೇರಿದಂತೆ ವಿವಿಧ ಉಪಕರಣಗಳನ್ನು ದೇಣಿಗೆ ನೀಡಿದೆ.

ಕಾರ್ಯಕ್ರಮದಲ್ಲಿ ಬೇಲೂರು ಮೆಕಿನ್ ಎನರ್ಜಿ ಸಂಸ್ಥೆಯ ಅಧಿಕಾರಿಗಳಾದ ವಿನೋದ್ ಪಾಟೀಲ್, ಶ್ರೀನಿವಾಸ್ ಹಾಗೂ ಈರಣ್ಣ ಬಡಿಗೇರ್ ಅವರು ತಂತ್ರಜ್ಞಾನದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ಪಡೆಯುವಂತೆ ಪ್ರೇರಣೆ ನೀಡಿದರು. ಜೊತೆಗೆ ಸಂಸ್ಥೆಯ ಪ್ರಮುಖರು (ಮೇಲಾಧಿಕಾರಿಗಳು) ವಿಡಿಯೋ ಕಾಲ್ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸಿ ಶುಭಕೋರಿದರು ಮತ್ತು ಮಕ್ಕಳನ್ನು ವಜ್ರಕ್ಕೆ ಹೋಲಿಸಿ ಗೌರವಿಸಿದರು.

ದೇವಗಾವ ಗ್ರಾಮದಲ್ಲಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನೀತ್ ಕೊರವನವರು ತಮ್ಮ ಪರಿಶ್ರಮದಿಂದ ಈ ಉಪಕರಣಗಳನ್ನು ಶಾಲೆಗೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬೈಲೂರು ಸಿಆರ್‌ಪಿ (ಸಂಪನ್ಮೂಲ ವ್ಯಕ್ತಿ) ಸಂಜೀವ್ ಹುಬ್ಬಳ್ಳಿ ಅವರು ಭಾಗವಹಿಸಿ ಸಂಸ್ಥೆಯ ಕ್ರಮವನ್ನು ಶ್ಲಾಘಿಸಿದರು. ಜೊತೆಗೆ ಸರಕಾರಿ ಪ್ರೌಢಶಾಲೆ ಕತ್ರಿದಡ್ಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಎನ್. ಹೊಂಗಲ್ ಸಮುದಾಯದತ್ತ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯಗುರು ಎಸ್.ಎಲ್. ಪೋಳ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ಗ್ರಾಮ ಯುವಕರು, ಗ್ರಾಮ ಪಂಚಾಯತ್ ಸದಸ್ಯರಾದ ಭರತ್ ಗಂಧಿಗವಾಡ ಮತ್ತು ಬಸವರಾಜ ಮುಪ್ಪಿನಮಠ, ಹಾಗೂ ರವಿ ಪತ್ತಾರ್, ಕಿರಣ್ ಕೋಟಗಿ, ಅಕ್ಷಯ್ ಧೂಳಪ್ಪನವರ್, ಈರಣ್ಣ ದಾಸ್ತಿಕೊಪ್ಪ, ಲಿಂಗರಾಜ್ ಕಡೆಮನಿ, ಶಿವು ಮಡಾಕರ್ ಮತ್ತಿತರರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";