ಬೆಳಗಾವಿ: ನಗರದ ಶಿವಬಸವ ನಗರದ ನೂತನ ಕಾರಂಜಿ ಮಠದ ರಜತ ಮಹೋತ್ಸವ ಹಾಗೂ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ದೇಶ್ವರ ಮಠ ಹಂದಿಗುಂದ ಆಡಿ ಇವರಿಂದ ಮಹಾತ್ಮರ ಜೀವನ ದರ್ಶನ ಪ್ರವಚನ ಜರುಗಿತು.
ಇದೇ ನ. 12ರಿಂದ 16ರವರೆಗೆ ಪ್ರತಿದಿನ ಸಾಯಂಕಾಲ 6:00ಗೆ ಜರುಗಲಿರುವ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಿನ್ನೆ ಜರುಗಿತು. ಶಿವಾನುಭವ ಮಂಟಪ ಶ್ರೀ ಕಾರಂಜಿ ಮಠ ಶಿವಬಸವ ನಗರ ಬೆಳಗಾವಿಯಲ್ಲಿ ಈ ಕಾರ್ಯಕ್ರಮ ಉತ್ತಮವಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ, ಪ.ಪೂ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು (ನಾಗನೂರು ಶ್ರೀ ರುದ್ರಾಕ್ಷಿಮಠ ಬೆಳಗಾವಿ), ಪೂ.ಶ್ರೀ ಶಿವಾನಂದ ಮಹಾ ಸ್ವಾಮಿಗಳು (ಶ್ರೀ ಸಿದ್ಧೇಶ್ವರ ಮಠ ಹಂದಿಗುಂದ-ಆಡಿ), ಬೆಳಗಾವಿ ಉತ್ತರ ಶಾಸಕರಾದ ರಾಜು ಶೇಟ್, ಪ್ರಮೂಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.