ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಕಿಬಾವಿ ಗ್ರಾಮದ ಮಹಿಳೆಯ ಫೋಟೊ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಆರೋಪ ಹಿನ್ನಲೆ ಫೋಟೋಗ್ರಾಫರ್ನನ್ನು ಅಪಹರಿಸಿ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದ ಎಂಟು ಜನ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಉಮೇಶ ಹೊಸೂರು ಅಪಹಣರಕ್ಕೆ ಒಳಗಾದ ವ್ಯಕ್ತಿ. ಪ್ರಕರಣ ಸಂಬಂಧ ಬಸವರಾಜ್ ನರಟ್ಟಿ, ಪ್ರವೀಣ ಉಮರಾಣಿ, ವಿಕ್ಕಿ, ತಾರಾ ನರಟ್ಟಿ, ಲಕ್ಷ್ಮಿ ನರಟ್ಟಿ ಸೇರಿ ಎಂಟು ಜನರನ್ನು ಬಂಧಿಸಿದ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬಸವರಾಜ್ ನರಟ್ಟಿಗೆ ಸೇರಿದ ಸ್ಟುಡಿಯೋದಲ್ಲಿ ಕೆಲಸ ಮಾಡ್ತಿದ್ದ ಉಮೇಶ. 12 ವರ್ಷಗಳ ಕಾಲ ಬಸವರಾಜ್ ನರಟ್ಟಿ ಸ್ಟುಡಿಯೋದಲ್ಲಿ ಕೆಲಸ ಮಾಡ್ತಿದ್ದ. ಸರಿಯಾಗಿ ಸಂಬಳ ಕೊಡ್ತಿಲ್ಲವೆಂದು ಕಳೆದ ವರ್ಷ ಕೆಲಸ ಬಿಟ್ಟು ಸ್ವಂತ ಸ್ಟುಡಿಯೋ ತೆರೆದಿದ್ದ ಉಮೇಶ.
ಮದುವೆ, ಗೃಹ ಪ್ರವೇಶಗಳ ಆರ್ಡರ್ ಹಿಡಿದು ವಿಡಿಯೋಗ್ರಾಫಿ ಮಾಡ್ತಿದ್ದ ಉಮೇಶ ಎರಡು ದಿನಗಳ ಹಿಂದೆ ಬೆಳಗಾವಿಯ ಕೆಪಿಟಿಸಿಎಲ್ ಹಾಲ್ನಲ್ಲಿ ನಡೆಯುತ್ತಿದ್ದ ಮದುವೆ ಆರ್ಡರ್ ಹಿಡಿದಿದ್ದ ಕೆಪಿಟಿಸಿಎಲ್ ಹಾಲ್ಗೆ ಬಂದ ವಿಕ್ಕಿ ಎಂಬಾತ ಉಮೇಶನನ್ನು ತನ್ನ ಕಾರಿನ ಕಡೆಗೆ ಕರೆದೊಯ್ದು ಅಪಹರಣ ಮಾಡಲಾಗಿದೆ.
ವಿಕ್ಕಿ ಹಾಗೂ ಆತನ ಇಬ್ಬರ ಸ್ನೇಹಿತರಿಂದ ಕಾರಿನಲ್ಲೇ ಉಮೇಶ ಮೇಲೆ ಹಲ್ಲೆ ನಡೆದಿದೆ. ಚಿವಟಗುಂಡಿ ಕ್ರಾಸ್ ಬಳಿ ವಾಹನ ನಿಲ್ಲಿಸಿ ಕಬ್ಬಿನದ ರಾಡ್ನಿಂದ ವಿಕ್ಕಿಯಿಂದ ಉಮೇಶ ಮೇಲೆ ಹಲ್ಲೆ ಜರುಗಿದೆ. ಬಳಿಕ ಬೈಲಹೊಂಗಲದ ಬಸವರಾಜ್ ನರಟ್ಟಿ ಸಂಬಂಧಿಕರ ಮನೆಗೆ ಆರೋಪಿಗಳು ಉಮೇಶನನ್ನ ಕರೆದೊಯ್ಡಿದ್ದಾರೆ.
ನಮ್ಮ ಮನೆಯ ಹೆಣ್ಣಮಗಳಾದ ತಾರಾ ಫೋಟೊವನ್ನು ನಿನ್ನ ಬಳಿ ಏಕೆ ಇಟ್ಟುಕೊಂಡಿರುವೆ ಎಂದು ಹಲ್ಲೆ ಮಾಡಲಾಗಿದೆ. ತಾರಾ ನರಟ್ಟಿ, ಬಸವರಾಜ್ ನರಟ್ಟಿ, ಲಕ್ಷ್ಮಿ ನರಟ್ಟಿಯಿಂದಲೂ ಉಮೇಶ ಮೇಲೆ ಹಲ್ಲೆ, ಜೀವಬೆದರಿಕೆ ಹಾಕಿ ಉಮೇಶನನ್ನು ಕಳುಹಿಸಲಾಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿರುವ ಉಮೇಶ ಹಳೇ ದ್ವೇಷಕ್ಕೆ ಹಲ್ಲೆ ಮಾಡಿ, ಈಗ ಮಹಿಳೆಯ ಫೋಟೊ ಇದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದಾರೆಂದು ಉಮೇಶ ಆರೋಪಿಸಿದ್ದಾನೆ.
ಉಮೇಶ ನೀಡಿದ ದೂರಿನ ಆಧರಿಸಿ ಎಂಟು ಜನರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.