ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಜರುಗುತ್ತಿರುವ, ಶೈಕ್ಷಣಿಕ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಪ್ರತಿ ವರ್ಷವೂ ಆಯೋಜಿಸುತ್ತಿರುವ ಸರ್ವೋದಯ ಸಂಯುಕ್ತ ಪದವಿಪೂರ್ವ ಕಾಲೇಜು, ಮಾಂಜರಿ ಹಾಗೂ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಮಾಂಜರಿ ಎಂದಿನಂತೆ ಈ ವರ್ಷವೂ ಕಾರ್ಯಕ್ರಮ ಆಯೋಜಿಸಿ ಜರುಗಿತು.
ಈ ಸ್ಪರ್ಧೆಯನ್ನು ಕಳೆದ 25 ವರ್ಷದಿಂದ ತಪ್ಪದೆ ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಈ ವೇದಿಕೆಯಿಂದ ಅನೇಕ ಭಾಷಣಕಾರರು ಹೊರಹೊಮ್ಮಿದ್ದಾರೆ. ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಎಲ್ಲ ಅಥಿತಿ ಹಾಗೂ ಅಧಿಕಾರಿಗಳು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಆಯೋಜಕರು ಹಾಗೂ ಮಾರ್ಗದರ್ಶಕರಾದ ಸಿಧಾರ್ಥ ಗಾಯಗೊಳ ( ಸಾಮಾಜಿಕ ಕಾರ್ಯಕರ್ತರು) ರವರು ಮಾತನಾಡಿ, ಕಾರ್ಯಕ್ರಮವನ್ನು ಆಯೋಜಿಸುವ ಮೂಲ ಉದ್ದೇಶವೆಂದರೆ, ಭಾರತದ ಮುಂದಿನ ದಿನಗಳಲ್ಲಿ ದೇಶದ ಶಕ್ತಿಯಾಗಿ ಹೊರಹೊಮ್ಮಲಿರುವ ಮಕ್ಕಳಲ್ಲಿ ರಾಷ್ಟ್ರದ ಸಂವಿಧಾನದ ಬಗ್ಗೆ ಮತ್ತು ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅನೇಕ ಶಾಲೆಗಳಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಲು ಆಗಮಿಸಿದ್ದರು. ವಿಷೇಶವೆಂದರೆ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಕಾರ್ಯಕ್ರಮದಲ್ಲಿ ಪಠಿಸಿದರು. ಸ್ಪರ್ಧೇಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಹಿನ್ನೆಲೆ ಮತ್ತು ಪ್ರಾಮುಖ್ಯತೆಯ ಕುರಿತು ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಪ್ರಜಾಪ್ರಭುತ್ವದ ಆಧಾರ ಸ್ತಂಭದ ವಿಷಯಗಳನ್ನು ವಿಂಗಡಿಸಲಾಗಿತ್ತು.
ಈ ವೇಳೆ, ಸಿಧಾರ್ಥ ಗಾಯಗೊಳ್, ಶ್ರೀರಾಮಚಂದ್ರ ಕಧಮ್, ರವೀಂದ್ರ ವಡವಡೆ, ಡಾ.ದೀಪಕ್ ಆರ್. ಕಾಸಾಯಿ, ರಾಜು ಲಂಬೂಗೋಳ್ ಸೇರಿದ ಹಾಗೆ ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.