ಬೆಳಗಾವಿ: ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನ, ಮಹಾಂತೇಶನಗರದಲ್ಲಿ ವಿಜೃಂಭಣೆಯಿಂದ ಸಾಮೂಹಿಕ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಮಹಾಂತೇಶ ತೋರಣಗಟ್ಟಿ ಉದ್ಘಾಟಿಸಿ ಮಾತನಾಡಿದರು. ಅವರು “ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಇಚ್ಛಾಶಕ್ತಿ ಅಗತ್ಯ. ಈ ಇಚ್ಛಾಶಕ್ತಿಯು ಬಸವತತ್ವದಿಂದ ನನ್ನಲ್ಲಿ ಬೆಳೆದು ಬಂದಿದೆ” ಎಂದು ಅಭಿಪ್ರಾಯಪಟ್ಟರು. ತಾವು ನಂಬಿರುವ ನಿಜವಾದ ಬಸವತತ್ವವನ್ನು ಆಚರಿಸುವ ಒಬ್ಬ ಲಿಂಗಾಯತ, ಲಕ್ಷ ಲಿಂಗಾಯತರಿಗೆ ಸಮ ಎಂದು ನುಡಿದರು. ಪ್ರತಿ ಗ್ರಾಮದಲ್ಲಿ ಬಸವ ಬಳಗಗಳು ರೂಪುಗೊಳ್ಳಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಲಿಂಗಾಯತ ಸಂಘಟನೆಯ ಪಾತ್ರವನ್ನು ಅವರು ಶ್ಲಾಘಿಸಿದರು.
ನ್ಯಾಯವಾದಿ ಸುನೀಲ ಸಾಣಿಕೊಪ್ಪ ಮಾತನಾಡಿ, ಅಂಬಿಗರ ಚೌಡಯ್ಯರ ವಚನಗಳ ಪಾಪ–ಪುಣ್ಯ ಕುರಿತು ಆಳವಾದ ವಿಶ್ಲೇಷಣೆ ನೀಡಿದರು. “ಬಸವಣ್ಣನವರ ಪ್ರಕಾರ ಧರ್ಮವೆಂದರೆ ಕಾಯಕ ನಿಷ್ಠೆ. ಪತಿತ, ನೊಂದ, ಶೋಷಿತ ಹಾಗೂ ದಲಿತರನ್ನು ಮೇಲಕ್ಕೆತ್ತುವ ಕೆಲಸವೇ ನಿಜವಾದ ಧರ್ಮ” ಎಂದು ಹೇಳಿದರು.
ಸಾಮೂಹಿಕ ಪ್ರಾರ್ಥನೆಯನ್ನು ಸುರೇಶ ನರಗುಂದ ಅವರು ನಡಿಸಿದರು. ವಚನ ವಿಶ್ಲೇಷಣೆಯಲ್ಲಿ ಜಯಶ್ರೀ ಚಾವಲಗಿ, ಬಿ.ಪಿ. ಜವನಿ, ವಿ.ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಮಹದೇವ ಕೆಂಪಿಗೌಡರ, ಶಂಕರ ಗುಡಸ ಮತ್ತು ಶರಣಶರಣೆಯರು ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣಾ ದೇಯಣ್ಣವರ ವಹಿಸಿದ್ದರು. ಶಾಂತಾ ಕಂಬಿ ಅವರು ದಾಸೋಹ ಸೇವೆಗೈದರು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ತೆಗ್ಗಿ, ಗಂಗಪ್ಪ ಉಣಕಲ, ಮಹಾನಂದಾ ಅರವಿಂದ ಪರುಶೆಟ್ಟಿ ದಂಪತಿಗಳು, ಶೋಭಾ ದೇಯಣ್ಣವರ, ಅನಸೂಯಾ ಬಶೆಟ್ಟಿ, ರತ್ನಾ ಬೆಣಚನಮರಡಿ, ಶೇಖರ ವಾಲಿ ಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಅನಿಲ ರಘಶೆಟ್ಟಿ, ಬಸವರಾಜ ಕರಡಿಮಠ, ಮ.ಬಿ. ಕಾಡೆ, ಲಕ್ಷ್ಮಣ ಕುಂಬಾರ, ಬಸವರಾಜ ಮತ್ತಿಕೂಪ್ಪ, ಈರಪ್ಪ ಕಮ್ಮಾರ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಸೋಮಶೇಖರ ಕತ್ತಿ, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಶಿವಾನಂದ ನಾಯಕ ಮತ್ತು ಶರಣಶರಣೆಯರು ಉಪಸ್ಥಿತರಿದ್ದರು.
ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು. ಅಂತಿಮವಾಗಿ ಸುರೇಶ ನರಗುಂದ ವಂದನಾಪೂರ್ವಕವಾಗಿ ಧನ್ಯವಾದ ಅರ್ಪಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143