ಯಮಕನಮರಡಿ: ಉದ್ಯೋಗಾನ್ವೇಷಣೆಯಲ್ಲಿ ನಿರುದ್ಯೋಗಿಗಳ ಬಾಳಿಗೆ ಬೆಳಕು ತರಲಿರುವ ಬೃಹತ್ ಉದ್ಯೋಗ ಮೇಳವು ಜೂನ್ 28, ಶನಿವಾರದಂದು ಉಳ್ಳಾಗಡ್ಡಿ ಖಾನಾಪುರದ ಶ್ರೀ ಡಿ.ಬಿ. ಹೆಬ್ಬಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 9:30ರಿಂದ ಸಂಜೆ 4:30ರವರೆಗೆ ನಡೆಯಲಿದೆ.
ಈ ಉದ್ಯೋಗ ಮೇಳವು ಸತೀಶ ಜಾರಕಿಹೊಳಿ ಫೌಂಡೇಶನ್ ಗೋಕಾಕ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ ಮತ್ತು ಶಾಸಕ ಡಿ.ಬಿ. ಹೆಬ್ಬಾಳಿ ಸರ್ಕಾರಿ ಪಿಯು ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದು, ಇದನ್ನು ಕಾಲೇಜಿನ ಪ್ರಾಚಾರ್ಯ ಎಂ.ಎಂ. ಮಗದುಮ್ಮ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಪ್ರತಿಷ್ಠಿತ ಕಂಪನಿಗಳ ಭಾಗವಹಿಸುವಿಕೆ:
ಈ ಮೇಳದಲ್ಲಿ ವೇಗಾ, ಎಲ್.ಎನ್.ಟಿ. ಫೈನಾನ್ಸ್, ಪೇಟಿಎಂ, ಗೋಲ್ಡ್ ಪ್ಲಸ್, ಪೀಲೆಕ್ಸಾ, ಎಲ್.ಐ.ಸಿ ಸೇರಿದಂತೆ ಹಲವಾರು ಖ್ಯಾತ ಕಂಪನಿಗಳು ಭಾಗವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ. ಈ ಭಾಗದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಈ ಉದ್ಯೋಗ ಮೇಳ ಐತಿಹಾಸಿಕ ತಾಣವನ್ನೇ ಅಲಂಕರಿಸಲಿದೆ.
ನೊಂದಣಿ ಉಚಿತ:
ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳು ಸ್ಥಳದಲ್ಲಿಯೇ ಲಭ್ಯವಿರುವ ಸ್ಕ್ಯಾನರ್‌ಗಳ ಸಹಾಯದಿಂದ ತಮ್ಮನ್ನು ಉಚಿತವಾಗಿ ನೊಂದಾಯಿಸಬಹುದು.
ಉದ್ಘಾಟನಾ ಸಮಾರಂಭ:
ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಹಾಗೂ ಇನ್ನಿತರ ಗಣ್ಯ ಅತಿಥಿಗಳಾದ ಪಾಂಡುರಂಗ ಭಂಡಾರಿ (ಉದ್ಯೋಗ ವಿನಿಮಯ ಕಚೇರಿ), ಸಂತೋಷ ನಾವಲಗಿ (ಜಿಲ್ಲಾ ಸಂಯೋಜಕ), ಮಂಜಳಾ ನಾಯಕ (ಹುಕ್ಕೇರಿ ತಹಶೀಲ್ದಾರ್), ಪ್ರಭಾವತಿ ಪಾಟೀಲ (ಬಿ.ಇ.ಒ), ಸುನಿತಾ ನಲವಡೆ (ಉಪ ಪ್ರಾಂಶುಪಾಲರು), ಮಹಾವೀರ ಸನಕಿ (ಎಸ್.ಡಿ.ಎಮ್.ಸಿ ಉಪಾಧ್ಯಕ್ಷ), ಫಾತಿಮಾ ಎಲ್. ಜಕಾತಿ (ವೃತ್ತಿಪರ ಸಂಯೋಜಕಿ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಗಡ್ಡಿ ಖಾನಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ಪಾಟೀಲ ವಹಿಸಲಿದ್ದಾರೆ.
ವರದಿ: ಎ.ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ:
+91 95905 51177