ಹೊಸದಿಲ್ಲಿ: ಪ್ರಜ್ಞಾಪೂರ್ವಕವಾಗಿ ಮಾಡುವ ನಿದ್ದೆಯಾದ ‘ಯೋಗನಿದ್ರೆ’ ಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ಇದರಿಂದ ಮಾನಸಿಕ ಸ್ಥಿಮಿತತೆ, ಭಾವನೆ ಹಾಗೂ ನಿದ್ರೆಯ ನಿಯಂತ್ರಣ ಮಾಡಬಹುದು ಎಂದು ದಿಲ್ಲಿ ಐಐಟಿ ಮತ್ತು ಏಮ್ಸ್‌ನ ತಜ್ಞರು ಹೇಳಿದ್ದಾರೆ.
ಯೋಗ ನಿದ್ರೆಯ ಬಗ್ಗೆ ದಿಲ್ಲಿ ಐಐಟಿ, ಏಮ್ಸ್ ಮತ್ತು ಮಹಾಜನ್ ಇಮೇ 2 ಜಿಂಗ್ ದಿಲ್ಲಿ ಸಂಸ್ಥೆಗಳು ಅಧ್ಯಯನ ನಡೆಸಿದ್ದವು. ನಿಯಮಿತವಾಗಿ ಯೋಗ ನಿದ್ರೆ ಮಾಡುವುದರಿಂದ ಆಯಾಸ ಪರಿಹಾರವಾಗುವುದಲ್ಲದೇ, ಜಾಗೃತ ಸ್ಥಿತಿಯನ್ನು ಹೆಚ್ಚಳ ಮಾಡುತ್ತದೆ ಎಂದು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿವೆ. ಯೋಗ ನಿದ್ರೆ ಬಲ್ಲವರು ಹಾಗೂ ತಿಳಿಯದವರ 2 ತಂಡಗಳನ್ನು ರಚಿಸಿ ಅವರಿಗೆ ಎಂಆರ್‌ಐ ಸ್ಕ್ಯಾನ್ ಮಾಡುವ ೫ ಎಂಆರ್‌ಐ ಸ್ಕ್ಯಾನ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಈ ವಿಷಯ ದೃಢ ಪಡಿಸಲಾಗಿದೆ
ಯೋಗ ನಿದ್ರೆ ಬಲ್ಲವರ ಮೆದುಳಿ ನಲ್ಲಾದ ಬದಲಾವಣೆಗಳು, ಯೋಗ ನಿದ್ರೆ ತಿಳಿಯದವರಲ್ಲಿನ ಬದಲಾವಣೆ ಗಿಂತ ಭಿನ್ನವಾಗಿವೆ. ಅನುಭವಿ ಧ್ಯಾನಸ್ಥರ ಮನಸ್ಸು ಹೆಚ್ಚು ವಿಚಲಿತಗೊಂಡಿಲ್ಲ. ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.