ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಅನುದಾನದಿಂದ ಮಹಿಳಾ ಕಲ್ಯಾಣ ಸಂಸ್ಥೆಯು ಜಿಲ್ಲಾ ಪಂಚಾಯತ್ ಆವರಣದಲ್ಲಿ ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗಾಗಿ ನಿರ್ವಹಿಸುತ್ತಿರುವ ಶಿಶುಪಾಲನಾ ಕೇಂದ್ರಕ್ಕೆ ಶ್ರೀಮತಿ ಲಕ್ಷಿö್ಮ ಹೆಬ್ಬಾಳಕರ, ಮಾನ್ಯ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಹಾಗೂ ಪ್ರೀಯಾಂಕ್ ಖರ್ಗೆ ಮಾನ್ಯ ಸಚಿವರು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ ರಾಜ್ ಇವರು ಭೇಟಿ ನೀಡಿ ಶೀಸುಪಾಲನಾ ಕೇಂದ್ರ ಚಟುವಟಿಕೆಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು, ಅವರೊಂದಿಗೆ ಶ್ರೀ ರಾಜು (ಆಸಿಫ್) ಸೇಟ್ ಮಾನ್ಯ ಶಾಸಕರು ಬೆಳಗಾವಿ ಉತ್ತರ, ಮಹಮ್ಮದ್ ರೋಶನ್ ಜಿಲ್ಲಾಧಿಕಾರಿಗಳು ಬೆಳಗಾವಿ, ರಾಹುಲ ಶಿಂಧೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಶ್ರೀಮತಿ ಶ್ರೀವಿದ್ಯಾ ಪಂಚಾಯತ ರಾಜ್ಯ ಇಲಾಖೆಯ ಹಿರಿಯ ಆಧಿಕಾರಿಗಳು ಬೆಂಗಳೂರು ಇವರುಗಳು ಉಪಸ್ಥಿತರಿದ್ದರು. ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃಧ್ಧಿಗೆ ಹಮ್ಮಿಕೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಶಿಕ್ಷಕಿ ಭಾರತಿ ಪಾಟೀಲ ಇವರಿಂದ ಮಾಹಿತಿ ಪಡೆದುಕೊಂಡು, ದುಡಿಯುವ ತಾಯಂದಿರು ನೆಮ್ಮದಿಯಿಂದ ಮಕ್ಕಳನ್ನು ಕೇಂದ್ರಗಳಲ್ಲಿ ಬಿಟ್ಟು ತಮ್ಮ ಕೆಲಸಗಳಲ್ಲಿ ತೊಡಗಲು ಅನೂಕೂಲವಾಗುವದಕ್ಕೆ ಸರ್ಕಾರ ಇಂತಹ ಕೇಂದ್ರಗಳನ್ನು ಪ್ರಾರಂಭಿಸಿದೆ ಎಂದರು
Nammur Dhwani > Local News > ಶಿಶುಪಾಲನಾ ಕೇಂದ್ರಕ್ಕೆ ಸಚಿವರ ಭೇಟಿ.