Live Stream

[ytplayer id=’22727′]

| Latest Version 8.0.1 |

Local NewsState News

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸುವರ್ಣ ವಿಧಾನಸೌಧದಲ್ಲಿ ಅಣಕು ಸಂಸತ್ ಕಲಾಪ

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸುವರ್ಣ ವಿಧಾನಸೌಧದಲ್ಲಿ ಅಣಕು ಸಂಸತ್ ಕಲಾಪ

ಬೆಳಗಾವಿ: ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ‘ಅಣಕು ಸಂಸತ್‌ ಕಾರ್ಯಕಲಾಪ’ವನ್ನು ಭವ್ಯವಾಗಿ ಪ್ರದರ್ಶಿಸಿದರು. ಬೆಳಗಾವಿ ಚಳಿಗಾಲ ಅಧಿವೇಶನದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೈಜ ಸಂಸತ್‌ ಕಲಾಪದ ವಿವಿಧ ಹಂತಗಳನ್ನು ಸೃಜನಾತ್ಮಕವಾಗಿ ಮಿಂಚಿಸಿದರು.

ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕಾರ, ಪ್ರಶ್ನೋತ್ತರ ಅವಧಿ, ಶೂನ್ಯವೇಳೆ, ಮಸೂದೆಗಳ ಮಂಡನೆ ಸೇರಿದಂತೆ ಹಲವು ಸಂಸತ್ ಪ್ರಕ್ರಿಯೆಗಳನ್ನು ಹಂತಹಂತವಾಗಿ ವಿದ್ಯಾರ್ಥಿಗಳು ನೈಜ ರೀತಿಯಲ್ಲಿ ಪ್ರಸ್ತುತಪಡಿಸಿದರು.

ಈ ಅಣಕು ಕಲಾಪದಲ್ಲಿ ಸೂಫಿಯಾ ಸನದಿ ಸಭಾಧ್ಯಕ್ಷರಾಗಿ, ಸಾಧನಾ ಅಗಸಿಬಾಗಿಲ ಮುಖ್ಯಮಂತ್ರಿಯಾಗಿ ಪಾಲ್ಗೊಂಡರು. ಜೊತೆಗೆ ಭೂಮಿಕಾ ಕುರುಬರ, ಅಂಕಿತಾ ಗಣಾಚಾರಿಮಠ, ಶ್ವೇತಾ ಬಡಿಗೇರ, ವೀಣಾ ಪರುಶಟ್ಟಿ, ಸಮೀಕ್ಷಾ ಸುತಾರ, ಮಧುಶ್ರೀ ಮಠಪತಿ, ತನುಜಾ ಕೆಂಪಗುತ್ತಿ, ಭರತ ಮಾನಗಾವಿ, ಶ್ರೀಜನ ಹರಿಜನ ಸೇರಿದಂತೆ 20 ಮಂದಿ ವಿದ್ಯಾರ್ಥಿಗಳು ಸದಸ್ಯರ ಪಾತ್ರದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಸುಮಿತ್ರಾ ಕರವಿನಕೊಪ್ಪ, ಶಿವಾನಂದ ತಲ್ಲೂರ ಮತ್ತು ಮಹೇಶ್ ಅಕ್ಕಿ ಅವರಿಗೂ ವಿಶೇಷ ಮೆಚ್ಚುಗೆ ವ್ಯಕ್ತವಾಯಿತು. ವಿವಿಧ ಶಾಲೆಗಳ ನೂರಾರು ಮಕ್ಕಳೂ ಸಭಾಂಗಣದಲ್ಲಿ ಹಾಜರಿದ್ದು, ಸಂಸತ್‌ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಂದಲೇ ಕಾಣುವ ಅವಕಾಶ ಪಡೆದುಕೊಂಡರು.

ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಜೊತೆಗೆ ನಾಯಕತ್ವ ಮತ್ತು ಭಾಷಣ ಕೌಶಲ್ಯಗಳನ್ನು ವೃದ್ಧಿಸಲು ಸಹಕಾರಿಯಾಯಿತು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";