Live Stream

[ytplayer id=’22727′]

| Latest Version 8.0.1 |

State News

ಮೂಡಲಗಿ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ನೇಹ ಸಮ್ಮಿಲನ

ಮೂಡಲಗಿ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ನೇಹ ಸಮ್ಮಿಲನ

ಮೂಡಲಗಿ : ಮೂಡಲಗಿಯ “ಸ್ನೇಹ ಸಿಂಚನ’’ವೆಂಬ ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಿಳ್ಕೋಡಿಗೆ ಸಮಾರಂಭ ಇತ್ತೀಚೆಗೆ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸರಕಾರಿ ಪ್ರೌಢ ಶಾಲೆ ಗೋಕಾಕ ಸಹಶಿಕ್ಷಕರಾದ ಶ್ರೀ ಆರ್ ಎಲ್ ಮಿರ್ಜಿಯವರು ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶ್ರದ್ದೆಯಿಂದ ಪುಸ್ತಕವನ್ನು ಓದಿದರೆ ಜ್ಞಾನವನ್ನು ಗಳಿಸಬಹುದಾಗಿದೆ ಮತ್ತು ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಂಡರೆ ಸಮಾಜದಲ್ಲಿ ಸುಸಂಸ್ಕೃತರಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು. ಅದೇ ರೀತಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಜೀತ ಮನ್ನಿಕೇರಿಯವರು ಇದೇ ತಾಲ್ಲೂಕಿನಲ್ಲಿ ಹುಟ್ಟಿ ಇದೇ ಸಂಸ್ಥೆಯಲ್ಲಿ ಕಲಿತು ಇದೇ ಸಂಸ್ಥೆಗೆ ಅತಿಥಿಯಾಗಿ ವೇಧಿಕೆಯನ್ನು ಹಂಚಿಕೊಂಡಿರುವುದಕ್ಕೆ ಹೆಮ್ಮೆ ಪಟ್ಟರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರಗತಿ ಪಡಿಸುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು ಹಾಗೂ ಮೂಡಲಗಿ ಆರಕ್ಷಕ ಠಾಣೆಯ ಪಿ ಎಸ್ ಆಯ್ ಆಗಿರುವ ರಾಜು ಪೂಜೇರಿಯವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತಿಯಾಗಿ ಮೋಬೈಲ್ ಬಳಕೆ ಮತ್ತು ದುಷ್ಛಟಗಳಿಂದ ದೂರವಿದ್ದರೆ ಜೀವನದಲ್ಲಿ ಏನು ಬೇಕಾದರು ಸಾದಿಸಬಹುದು ಎಂದು ಹೇಳಿದರು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವ್ಹಿ. ಆರ್ ಸೊನವಾಲ್ಕರರವರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಚೈತನ್ಯವನ್ನು ಮೂಡಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಟಿಸಿದರು.

 

ಅದೇ ರೀತಿ ಸಂಸ್ಥೆಯ ಉಪಾದ್ಯಕ್ಷರಾದ ಆರ್ ಪಿ ಸೊನವಾಲ್ಕರ, ನಿರ್ದೇಶಕರಾದ ವ್ಹಿ ಎ ಸೊನವಾಲ್ಕರ, ಎ ವ್ಹಿ ಹೊಸಕೋಟಿ, ಎಸ್ ಎಮ್ ಸೊನವಾಲ್ಕರ, ಎ ಆಯ್ ಸತರಡ್ಡಿ, ಎಸ್ ವ್ಹಿ ಹೊಸೂರರವರು ಉಪಸ್ಥಿತಿಯನ್ನು ಹೊಂದಿದ್ದರು ಮತ್ತು ಕಾಲೇಜಿನ ಪ್ರಾಚಾರ್ಯರಾದ ಎಮ್ ಎಸ್ ಪಾಟೀಲರವರು ಸ್ವಾಗತಿಸಿದರು,ನಿರೂಪಣೆ ಶ್ರೀ ಎಚ್ ಡಿ ಚಂದರಗಿ,ವರದಿ ವಾಚನ ಶ್ರೀ ಎಸ್ ಕೆ ಹಿರೇಮಠ,ಸಾಧಕ ವಿದ್ಯಾರ್ಥಿಗಳ ಸನ್ಮಾನ ಶ್ರೀ ಬಿ ಜಿ ಗಡಾದ,ಶ್ರೀ ಸಿ ಎಸ್ ಕಾಡಪ್ಪಗೋಳರವರು ವಂದಿಸಿದರು ಹಾಗೂ ಎಲ್ಲರೂ ಉಪನ್ಯಾಸಕರು,ಸಹಶಿಕ್ಷಕರು, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತಿಯಿದ್ದರು

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";