ಬೆಳಗಾವಿ: ಜಿಲ್ಲೆಯ ಖಾನಾಪುರದ ಶಾಂತಿನಿಕೇತನ ಶಾಲೆಯ ಮಕ್ಕಳು ಪ್ರವಾಸಕ್ಕೆ ಬಂದಿದ್ದ ಹಿನ್ನಲೆ ಪ್ರವಾಸಿ ತಾಣಗಳನ್ನ ವೀಕ್ಷಿಸಿ ವಾಪಸ್ ತೆರಳುವಾಗ 36 ಮಕ್ಕಳಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿದೆ.
ವಾಹನ ಚಾಲಕನ ಅಜಾಗರೂಕತೆಯಿಂದ ಡಿವೈಡರ್ ಗೆ ಢಿಕ್ಕಿ. ಢಿಕ್ಕಿಯಾದ ಬಳಿಕ ಮಗುಚಿ ಬಿದ್ದ ಬಸ್. ಬಸ್ ಡಿಕ್ಕಿಯಾದ ಪರಿಣಾಮ 10 ಕ್ಕೂ ಹೆಚ್ಚು ಮಕ್ಕಳಿಗೆ ಗಾಯ. ಇದು ಬೆಳಗಾವಿಯಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ಬಸ್ .
ಪ್ರವಾಸಿ ತಾಣಗಳನ್ನ ವೀಕ್ಷಿಸಿ ವಾಪಸ್ ತೆರಳುವಾಗ ನಡೆದ ಘಟನೆ ಇದಾಗಿದ್ದು, ಗಾಯಾಳುಗಳಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಭೇಟಿ ನೀಡಿ, ಮಕ್ಕಳನ್ನ ಆಸ್ಪತ್ರೆಗೆ ಸೇರಿಸಿದ ಪೊಲೀಸ್ ಕಮೀಷನರ್.