Live Stream

[ytplayer id=’22727′]

| Latest Version 8.0.1 |

Local News

ಅಜ್ಞಾನದಿಂದ ಸುಜ್ಞಾನದ ಕಡೆ ಸಾಗುವುದು,ಮಾಯೆ ಯಾರನ್ನು ಬಿಟ್ಟಿಲ್ಲಾ ಏಕ್ರಾಗತೆ ಸಾದಿಸಬೇಕು; ಶರಣೆ ದಾನಮ್ಮಾ ಝಳಕಿ

ಅಜ್ಞಾನದಿಂದ ಸುಜ್ಞಾನದ ಕಡೆ ಸಾಗುವುದು,ಮಾಯೆ ಯಾರನ್ನು ಬಿಟ್ಟಿಲ್ಲಾ ಏಕ್ರಾಗತೆ ಸಾದಿಸಬೇಕು; ಶರಣೆ ದಾನಮ್ಮಾ ಝಳಕಿ

ಬೆಳಗಾವಿ: ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ಏಪ್ರಿಲ್ 13.2025 ರಂದು ವೀರ ವೀರಾಗಿಣಿ ವೈರಾಗ್ಯ ನಿಧಿ ಅಕ್ಕಮಹಾದೇವಿ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.

ಶರಣೆ ದಾನಮ್ಮಾ ಝಳಕಿ ಅವರು ಉಪನ್ಯಾಸ ನೀಡಿದರು. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಮಹಾದೇವಿ ಭಾವ ಬಂಧನವನ್ನ ಕಳಿಚಿ ಭಾವ ದಿಗಂಬರಳಾಗಿ ಭೀಕರ ಕಾಡಿನಲ್ಲಿ ಅಮಾವಾಸ್ಯೆ ಕಾಗ೯ತ್ತಲಿನಲ್ಲಿ ಬೇಸಿಗೆಯ ಬಿಸಿಲಲ್ಲಿ ಕೊರೆಯುವ ಚಳಿಯಲ್ಲಿ ಹುಣ್ಣಿಮೆಯ ಚಂದಿರನ ಬೆಳದಿಂಗಳಲ್ಲಿ ತಮ್ಮ ಆರಾಧ್ಯ ದೈವ ಚೆನ್ನಮಲ್ಲಿ ಕಾರ್ಜುನ ನನ್ನು ಅರಸುತ್ತ ಹಸಿವಾದಡೆ ಭಿಕ್ಷಾನ್ನಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಆತ್ಮಸಂಗಾತಕ್ಕೆ ಚನ್ನಮಲ್ಲಿಕಾಜು೯ನನುಂಟು, ಎಂದು ಹೇಳುತ್ತ ಸಾಗಿದ ಶರಣೆಮಹಾದೇವಿ ಪಟ್ಟ ಪಾಡನ್ನು ತಿಳಿಸಿದರು. ಅಜ್ಞಾನದಿಂದ ಸುಜ್ಞಾನದ ಕಡೆ ಸಾಗುವುದು,ಮಾಯೆ ಯಾರನ್ನು ಬಿಟ್ಟಿಲ್ಲಾ ಏಕ್ರಾಗತೆ ಸಾದಿಸಬೇಕು ಎಂದು ಮಾತನಾಡಿದರು.

ಪ್ರಾರಂಭದಲ್ಲಿ ಸುರೇಶ ನರಗುಂದ, ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು, ಬಸವರಾಜ ಗುರನಗೌಡ್ರ, ವಿ ಕೆ ಪಾಟೀಲ, ಆನಂದ ಕಕಿ೯, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಜಾನ್ವಿ ಘೋಪ೯ಡೆ, ಬಶೆಟ್ಟಿ ಅನಸೂಯ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚಾವಲಗಿ, ಮುಂ ವಚನ ವಿಶ್ಲೇಷಣೆ ಮಾಡಿದರು,ಪ್ರಶಾಂತ ಗುತ್ತಿಗೊಳಿ ದಾಸೋಹ ಸೇವೆಗೈದರು,ಸುರೇಶ ನರಗುಂದ ನಿರೂಪಿಸಿದರು. ಸುಜಾತಾ ಮತ್ತಿಕಟ್ಟಿ, ಅನ್ನಪೂರ್ಣ ಕಾಡಣ್ಣವರ, ವಿದ್ಯಾ ಕಕಿ೯, ಸಿದ್ದಪ್ಪ ಸಾರಾಪೂರಿ, ಅನೀಲ ರಘಶೆಟ್ಟಿ,ಬಸವರಾಜ ಗುರನಗೌಡರ, ಶೇಖರ ವಾಲಿಇಟಗಿ, ಬಸವರಾಜ ಮತ್ತಿಕಟ್ಟಿ , ಮಹಾಂತೇಶ ಮೆಣಸಿನಕಾಯಿ, ಜ್ಯೋತಿ ಬದಾಮಿ, ಗುರುಸಿದ್ದಪ್ಪ ರೇವಣ್ಣವರ, ಬಿ ಪಿ ಜವಣಿ, ಸೋಮಶೇಖರ ಕತ್ತಿ, ನಾಗನಗೌಡ ರಾ ಪಾಟೀಲ, ಶಿವಾನಂದ ಲಾಳಸಂಗಿ , ಬಿ ಬಿ ಮಠಪತಿ,ಶಿವಾನಂದ ನಾಯಕ, ಬಸವರಾಜ ಇಂಚಲ, ಬಸವರಾಜ ಬಿಜ್ಜರಗಿ, ತಿಗಡಿ ದಂಪತಿಗಳು ಶಂಕರ ಗುಡಸ, ಪ್ರಸಾದ ಹಿರೇಮಠ, ಸುನಂದಾ ಕೆಂಪಿಗೌಡರ ದಂಪತಿಗಳು, ಉಪಸ್ಥಿತರಿದ್ದರು.

ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಸುರೇಶ ನರಗುಂದ ವಂದಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";