ಗದಗ – ಕಪ್ಪತಗುಡ್ಡದಿಂದಾಗಿ ಮಧ್ಯ ಕರ್ನಾಟಕ ಭಾಗದಲ್ಲಿ ಕಾಲಕಾಲಕ್ಕೆ ಮಳೆಯಾಗಿ ರೈತರು ಸಮಾನದಿಂದ ಇರುವಾತಾಗಿದೆ. ಕಪ್ಪತ್ತಗುಡ್ಡ ಗದಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜೀವನಾಡಿಯಿದ್ಧಂತೆ. ನಗರ ಪ್ರದೇಶದಲ್ಲಿ ಸಿಗಲಾದ ಸ್ವಚ್ಛ ಗಾಳಿ, ನೀರು, ಕಪ್ಪತ್ತಗುಡ್ಡ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಿಗುತ್ತದೆ. ಕಪ್ಪತ್ತಗುಡ್ಡ ಖನಿಜ ಸಂಪತ್ತಿನ ಆಗರವಾಗಿದ್ದು. ಅಪರೂಪದ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಇದನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಉಳಿಸಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಗದುಗಿನ ಪೂಜ್ಯ ಡಾ||ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಕರ್ನಾಟಕ ಟಕ ಪತ್ರಕರ್ತರ ಸಂಘ ಕಪ್ಪತ್ತಗುಡ್ಡಕ್ಕೆ ಆಯೋಜಿಸಿದ ಅಧ್ಯಯನ ಶಿಬಿರದ ಸಮಾರೋಪ ಸಭೆಯ ಸಾನಿದ್ದವಹಿಸಿ ಮಾತಾನಾಡಿದರು.
ಕಪ್ಪತ್ತಡ್ಡದಲ್ಲಿ ಕೆರೆ ಹಳ್ಳಿಗಳ,ಝರಿಗಳು, ಪ್ರಾಣಿಸಾಕುಲ, ಪಕ್ಷಿಗಳ ಕಲವರ, ಪ್ರಕೃತಿಯ ರಮ್ಯತೆ ಕಂಡು ಬರುತ್ತದೆ. ಜೀವ ಜೀವ ವೈವಿಧ್ಯತೆಗೆ ಅದ್ಭುತ ಉದಾಹರಣೆಯಗಿವ ಕಪ್ಪತ್ತಗುಡ್ಡ ಸಂರಕ್ಷಣೆಗೆ ಎಲ್ಲಾ ಪತ್ರಕರ್ತರು ನಿಸ್ವಾರ್ಥ ಪ್ರಯತ್ನ ಮಾಡಬೇಕೆಂಬ ಶ್ರೀ ಸಿದ್ಧರಾಮಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ನಡೆಯಬಾರದು, ಇಲ್ಲಿ ಸ್ಥಾಪಿಸಲಾಗಿರುವ ನೂರಾರು ಗಾಳಿ ಯಂತ್ರಗಳಿಂದ ಈಗಾಗಲೇ ಇಲ್ಲಿನ ವನ್ಯಜೀವಿಗಳಿಗೆ ಬಹಳಷ್ಟು ತೊಂದರೆ ಆಗಿದೆ, ಇಲ್ಲಿ ಪರಿಸರ ಪ್ರವಾಸೋದ್ಯಮ ಆರಂಭವಾಗಲಿ ಪರಿಸರಪ್ರಿಯರು ಇಲ್ಲಿ ಬರುವಂತಾಗಲಿ ಇಲ್ಲಿನ ಅತ್ಯುತ್ತಮ, ಅಮೃತಮಯ ಗಾಳಿಯ ಸೇವನೆಯಿಂದ ಅವರಿಗೆ ಆರೋಗ್ಯದ ಸಮಸ್ಯೆಗಳು ದೂರವಾಗಲಿ ಈ ಹಿಂದೆ ಕೊಡಗಿನಲ್ಲಿ ನಡೆದ ಮತ್ತು ಕೇಳದ ವಯನಾಡಿನಲ್ಲಿ ನಡೆದ ರೀತಿಯಲ್ಲಿ ಭೂಕುಸಿತ ಪ್ರಕರಣಗಳು ಇಲ್ಲಿಯೂ ನಡೆಯಬಹುದಾದ ಆತಂಕವಿದೆ ಆದಕಾರಣ ಬೇರೆ ಬೇರೆ ರೀತಿಯ ವಾಣಿಜ್ಯ ಚಟುವಟಿಕೆಗಳು ಮಾತ್ರ ಇಲ್ಲಿ ಆರಂಭವಾಗುವುದು ಬೇಡ ಎಂದು ಅವರು ಸರ್ಕಾರಕ್ಕೆ ಬಲವಾಗಿ ಒತ್ತಾಯಿಸಿದರು.
ಕಪ್ಪತ್ತಗುಡ್ಡದ ಮೇಲೆ ಪತ್ರಕರ್ತರು ಮಾನವ ಸರಪಳಿ ನಿರ್ಮಿಸಿ ಕಪ್ಪತ್ತಗುಡ್ಡದ ಪರಿಸರ ರಕ್ಷಣೆಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದು ಮಾದರಿಯಾಗಿದೆ ನನಗಂತೂ ಒಂದು ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದವರು ಹೇಳಿದರು.
ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಅವರು ಮಾತನಾಡಿ ಕೊರೋನಾ ರೋಗದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಏನೆಲ್ಲಾ ಅವಾಂತರ ನಡೆಯಿತು ಎನ್ನುವುದನ್ನು ಎಲ್ಲರೂ ನೆನಪು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿನ್ನು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಕಪ್ಪತ್ತಗುಡ್ಡವು ಮತ್ತು ಇಲ್ಲಿನ ಅತ್ಯಮೂಲ್ಯ ಪರಿಶುದ್ಧ ಪರಿಸರ ಯಥಾವತ್ತಾಗಿ ಉಳಿಯದೆ ಹೋದಲ್ಲಿ ಅದಕ್ಕೆ ಮಾಧ್ಯಮದವರು ಮತ್ತು ಬುದ್ಧಿಜೀವಿಗಳೇ ಕಾರಣವಾಗುತ್ತಾರೆ ಆ ಆರೋಪ ನಮ್ಮ ಮೇಲೆ ಬೇಡ ಅದಕ್ಕಾಗಿ ನಾವೆಲ್ಲ ಸೇರಿ ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಮಾಡೋಣ ಎಂದು ಅವರು ಕರೆ ನೀಡಿದರು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಮುರುಗೇಶ ಶಿವಪೂಜಿ, ಪತ್ರಿಕಾ ವಿತರಕರ ಸಂಘದ ಶ್ರೀ ರಾಜ್ಯಾಧ್ಯಕ್ಷ ಶಂಕರ್ ಕುದುರೆಮೋತಿ, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸುದೇಶ್ ಕುಮಾರ್, ಸಂಪತ್ ಕುಮಾರ್ ಮುಚ್ಚಳಂಬಿ, ಶಿವಾನಂದ ಚಿಕ್ಕಮಠ, ಮಲ್ಲಿಕಾರ್ಜುನ ಎಚ್, ಸಂಘದ ಜಿಲ್ಲಾಧ್ಯಕ್ಷರುಗಳಾದ, ರಮೇಶ್ ಭಜಂತ್ರಿ, ಶರಣಪ್ಪ ಗುಮಗೇರಾ, ಡಿ ಬಿ ವಿಜಯಶಂಕರ್, ಡಾ ಮಂಜುನಾಥ , ಜಿಎಂ ರಾಜಶೇಖರ, ಅರುಣ ಭೂಪಾಲ್, ಸೋಮಶೇಖರ್ ಹಿರೇಮಠ ,ರಾಜು ದಖನಿ, ಮಾಲತೇಶ್ ಅಂಗೂರ್, ವಾಗೀಶ್ ಪಾಟೀಲ್, ರಮೇಶ್ ವತನ್, ಯೋಗೇಶ್ ಕುಮಾರ್, ನಟರಾಜ್ ಹಂಜಗಿಮಠ, ಕಾಶೀನಾಥ್ ಮಣೂರೆ, ಇತರ ಪ್ರಮುಖರಾದ ಮಾರುತಿ ಬನವಗೋಳ, ಮಲ್ಲಿಕಾರ್ಜುನ್ ಹೆಗ್ ನಾಯಕ್, ಕಿರಣ ಚೌಗುಲಾ, ನಾಗೇಶ್ ವನ್ನೂರ್ , ಹಿರೋಜಿ ಮಾವರಕರ್, ಪಾರಿಶ್ ಭೋಸ್ಲೆ, ಈರಣ್ಣ ಬುಡ್ಡಾಗೋಳ ,ಸುಧೀರ್ ಕಳ್ಳೇ , ಕೊಟ್ರೇಶ್, ಸೌಮ್ಯ ಯಂಕಂಚಿ, ಬಸವರಾಜ ಗಾಣಿಗೇರ್, ಚೆನ್ನಪ್ಪ ಮಾದರ್, ದಾವಲ್ ಸಾಬ್ ಸೇಡಂ ಮುಂತಾದವರು ಹಾಜರಿದ್ದರು.