ಚಿಕ್ಕೋಡಿ: ಅನೈತಿಕ ಸಂಬಂಧವನ್ನು ನೋಡಿ ಬುದ್ಧಿವಾದ ಹೇಳಿದ್ದಕ್ಕೆ ತನ್ನ ಮೈದನ ಪತ್ನಿಯ ಕೊಲೆ ಮಾಡಿದ ಮಹಿಳೆ ಹಾಗೂ ಅವಳ ಪ್ರೇಮಿಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಕರಿಗಾರ್ (32) ಹಾಗೂ ರಾಮಪ್ಪ ಊರ್ಫ ರಮೇಶ್ ಕೆಂಚಪ್ಪ ಬಸ್ತವಾಡೆ (25) ಆರೋಪಿಗಳು.
ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರರ್ಕೇಶ್ವರಗೌಡ ಪಾಟೀಲ್ ಇವರು ಶಿಕ್ಷೆ ನೀಡಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ. ಜಿ. ತುಂಗಳ ವಾದ ಮಂಡಿಸಿದರು.
ಆರೋಪಿ ಸುಧಾ ಮತ್ತು ರಾಮಪ್ಪ ಇವರ ನಡುವೆ ಅನೈತಿಕ ಸಂಬಂಧ ಹೊಂದಿದರು. ಇದನ್ನು ನೋಡಿದ ಕೊಲೆಯಾದ ಭಾಗ್ಯಶ್ರೀ ಇವಳು ತನ್ನ ಗಂಡ ಚೆನ್ನಪ್ಪ ಕರಿಗಾರ್ ಈತನಿಗೆ ಹೇಳಿದಳು. ಅದೇ ರೀತಿ ಸುಧಾ ಇವಳಿಗೆ ಬುದ್ಧಿ ಮಾತ ಹೇಳಿ ತಾಕಿತ್ತು ಮಾಡಿದಳು.
ಹೀಗಾಗಿ, ಆರೋಪಿ ಸುಧಾ ಇವಳು ಸಿಟ್ಟಾಗಿ ಭಾಗ್ಯಶ್ರೀಯ ಹೇಗಾದರೂ ಕೊಲೆ ಮಾಡಬೇಕೆಂದು ಉದ್ದೇಶದಿಂದ ಇದಕ್ಕೆ ಉಪಾಯ ಕೇಳಲು ಆರೋಪಿ ರಾಮಪ್ಪ ಇವನ ಸಲಹೆ ಪಡೆದುಕೊಂಡಳು. ಅವನು ನೀಡಿದ ಸಲಹೆ ಪ್ರಕಾರ 9 ಡಿಸೆಂಬರ್ 2019 ರಂದು ಭಾಗ್ಯಶ್ರೀ ಒಬ್ಬಳೇ ಮನೆಯಲ್ಲಿ ಮಲಗಿದಾಗ ಅವಳ ಕೊಲೆ ಮಾಡಿದರು ನಂತರ ಸಾಕ್ಷಿವನ್ನು ನಾಶ ಪಡಿಸುವ ಸಲುವಾಗಿ ಅವಳ ಮೈಮೇಲೆ ಸೀಮೆಎಣ್ಣೆ ಸುರಿವಿ ಸುಟ್ಟು ಹಾಕಿದಳು.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಹುಕ್ಕೇರಿ ಪೊಲೀಸ್ ನಿರೀಕ್ಷಕ ಕಲ್ಯಾಣಶೆಟ್ಟಿ ಅವರು ತನಿಖೆ ಮಾಡಿದ್ದಾಗ, ಸುಧಾ ಕರಿಗಾರ ಇವಳು ಕೊಲೆ ಮಾಡಿದ್ದು ಸ್ಪಷ್ಟವಾಗಿದೆ. ಅದೇ ರೀತಿ ಈ ಘಟನೆಯ ಕೆಲವು ತಿಂಗಳ ಹಿಂದೆ ತನ್ನ ಮಗನ ಕೊಲೆ ಸಹ ಇವಳೇ ಮಾಡಿದ್ದಾಳೆ.
ಆ ಪ್ರಕರಣದಲ್ಲಿ ಸಹ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ನ್ಯಾಯಾಂಗ ಬಂಧನದಲ್ಲಿ ಸುಧಾ ಕರಿಗಾರ್ ಬಂಧಿತರಾಗಿದ್ದು, ಸುಧಾ ಮತ್ತು ಪ್ರಚೋದನೆ ನೀಡಿದ ರಾಮಪ್ಪ ಇವನಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇಬ್ಬರಿಗೂ ಸಹ ಇವತ್ತು ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಇಡಲಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ್