ಬೆಂಗಳೂರು: 16ನೆ ರಾಷ್ಟ್ರೀಯ ಕೌಶಲ್ಯ ಸಮ್ಮೇಳನದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಿತು.
29 ನವೆಂಬರ್ 2024 ರಂದು ಬೆಂಗಳೂರಿನ ಗ್ರ್ಯಾಂಡ್ ಮಗ್ರತ್ ಹೋಟೆಲ್ ನಲ್ಲಿ ಹಿಂದುಳಿದವರ ಸಬಲೀಕರಣ ವಿಶೇಷವಾಗಿ ಯುವ ಸಮುದಾಯಗಳ ಅಭಿವೃದ್ಧಿಗಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಬೆಂಗಳೂರಿನಲ್ಲಿ ಜರುಗಿದ 16ನೆ ರಾಷ್ಟ್ರೀಯ ಕೌಶಲ್ಯ ಸಮ್ಮೇಳನದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಫ್ ವಿ ಟಿ ಆರ್ ಎಸ್ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ಸಂಸ್ಥೆಯ ಪರವಾಗಿ ಪ್ರಶಸ್ತಿ ಪಡೆದುಕೊಂಡರು. ಯು ಎನ್ ಡಿ ಪಿ ದಕ್ಷಿಣ ಭಾರತದ ಮುಖ್ಯಸ್ಥ ಜೆಯಾ ಚಂದನ್, ಎಫ್ ವಿ ಟಿ ಆರ್ ಎಸ್ ಎಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಫೆಲಿಕ್ಸ್ ಡಿಸೋಜಾ, ಬಾಷ್ ಕಂಪನಿ ಸಿ.ಎಸ್.ಆರ್ ಮುಖ್ಯಸ್ಥ ಶ್ರೀಮತಿ ಸಕೀನಾ ಬಾಕರ್ ಉಪಸ್ಥಿತರಿದ್ದರು.
ದೇಶದ ವಿವಿಧ ಭಾಗಗಳಿಂದ ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಅಧಿಕಾರಿಗಳು ಉಪಸ್ಥಿತರಿದ್ದರು.