Live Stream

[ytplayer id=’22727′]

| Latest Version 8.0.1 |

Local NewsNational NewsState News

ಕೂಡಿಗೆ ಮೊರಾರ್ಜಿ ಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ: ಗ್ರಾಹಕರ ರಕ್ಷಣೆ ಎಲ್ಲರ ಹೊಣೆ: ಗೌರಮ್ಮಣಿ

ಕೂಡಿಗೆ ಮೊರಾರ್ಜಿ ಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ: ಗ್ರಾಹಕರ ರಕ್ಷಣೆ ಎಲ್ಲರ ಹೊಣೆ: ಗೌರಮ್ಮಣಿ

 

ಕುಶಾಲನಗರ: ತಾಲ್ಲೂಕಿನ ಜಿಲ್ಲಾಡಳಿತ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಕುಶಾಲನಗರದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ
ಡಿ.26 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ: 2024 ಯನ್ನು ಏರ್ಪಡಿಸಲಾಗಿತ್ತು.

ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣಿ, ಗ್ರಾಹಕರ ಹಕ್ಕುಗಳು ಮತ್ತು ಹಿತರಕ್ಷಣೆ ಎಲ್ಲರ ಹೊಣೆಯಾಗಿದೆ.ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡಬೇಕು ಎಂದರು.

ಗ್ರಾಹಕರು ಅಂದರೆ ನಾವೆಲ್ಲರೂ… ನಾವು ಇಂದು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿ ಗ್ರಾಹಕ ಹಕ್ಕುಗಳು ಅವಶ್ಯಕತೆ ಇದೆ. ಮಾರುಕಟ್ಟೆ ವ್ಯವಸ್ಥೆಯು ಇಂದು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. ಆಗ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಕೆಲವೊಮ್ಮೆ ಗ್ರಾಹಕರ ಹಕ್ಕುಗಳ ತಿಳಿದಿರದೇ ಇರುವುದು ಕೂಡ ನಮಗೆ ಒಳಿತಲ್ಲ. ಇದನ್ನು ಜನ ದುರುಪಯೋಗ ಪಡಿಸಿಕೊಳ್ಳಬಹುದು. ಗ್ರಾಹಕರ ರಕ್ಷಣೆ ಮತ್ತು ಧ್ವನಿಯು ಸಮಾಜದ ಹಿತರಕ್ಷಣೆಯಾದಾಗ‌ ಮಾತ್ರ ಗ್ರಾಹಕರ ಸಂರಕ್ಷಣೆ ಸಾಧ್ಯ ಎಂದು ಗೌರಮ್ಮಣಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಡಾ ರೇಣುಕಾಂಭ‌ ಮಾತನಾಡಿ, ಪ್ರತಿವರ್ಷ ಡಿಸೆಂಬರ್‌ 24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.
ಗ್ರಾಹಕರು ಅಂದರೆ ನಾವು ಈ ಹಕ್ಕುಗಳ ಬಗ್ಗೆ ಶಿಕ್ಷಣ ಪಡೆಯುವುದು ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡುವುದು ಮುಖ್ಯವಾಗುತ್ತದೆ ಎಂದರು.

ಗ್ರಾಹಕರು ಯಾವುದೇ ವಸ್ತು, ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಆ ವಸ್ತುವಿನ ಗುಣಮಟ್ಟ, ಅವಧಿ ಇವನ್ನೆಲ್ಲಾ ಪರಿಶೀಲಿಸಿ ಕಡ್ಡಾಯವಾಗಿ ರಶೀದಿಯನ್ನು ಪಡೆದುಕೊಳ್ಳಬೇಕು. ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದ್ದಲ್ಲಿ ಅಂತಹ ಸಂದರ್ಭದಲ್ಲಿ ಗ್ರಾಹಕರು ರಶೀದಿಯೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರೆ ಗ್ರಾಹಕರಿಗೆ ಕಾನೂನಿನಡಿ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಡಾ ರೇಣುಕಾಂಭ‌ ತಿಳಿಸಿದರು.

ಗ್ರಾಹಕರ ಹಕ್ಕುಗಳು ಹಾಗೂ ಜವಾಬ್ದಾರಿ ಕುರಿತು ಮಾಹಿತಿ ನೀಡಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ , ಗ್ರಾಹಕರ ಹಕ್ಕುಗಳು ಇಂತಹ ಅನ್ಯಾಯದ ಆಚರಣೆಗಳ ವಿರುದ್ಧ ಗ್ರಾಹಕರನ್ನು ರಕ್ಷಿಸುತ್ತದೆ ಮತ್ತು ಈ ಹಕ್ಕುಗಳನ್ನು ಜಾರಿಗೊಳಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಗ್ರಾಹಕರು ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಭಾರತದಲ್ಲಿ, ಸರ್ಕಾರವು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು1986 ರ
ಗ್ರಾಹಕ ಸಂರಕ್ಷಣಾ ಕಾಯಿದೆಯೊಂದಿಗೆ 2019 ರ ಅಡಿಯಲ್ಲಿ ಗ್ರಾಹಕರ ಹಕ್ಕುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಮಹತ್ವ ಹಾಗೂ ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳು ಕುರಿತು
ಉಪನ್ಯಾಸ ನೀಡಿದರು.

ಗ್ರಾಹಕ ಸಂರಕ್ಷಣಾ ಕಾಯಿದೆ
ಹಾಗೂ ಗ್ರಾಹಕ ಜವಾಬ್ದಾರಿಗಳು ಕುರಿತು ಮಾಹಿತಿ ನೀಡಿದ ಅವರು,
ಗ್ರಾಹಕ ಹಕ್ಕುಗಳು,ಸುರಕ್ಷತೆಯ ಹಕ್ಕು, ಆಯ್ಕೆ ಮಾಡುವ ಹಕ್ಕು,
ತಿಳಿಸುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕು, ಕೇಳುವ ಹಕ್ಕು,ಪರಿಹಾರ ಹುಡುಕುವ ಹಕ್ಕು ಹಾಗೂ ಗ್ರಾಹಕರ ಹಕ್ಕುಗಳ ಕುರಿತು ಅವರು ಮಾಹಿತಿ ನೀಡಿದರು.

ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗಿವೆ ಎಂದರು.

ಕುಶಾಲನಗರದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಕೋಶಾಧಿಕಾರಿ ಕೆ.ಎಂ.ಗಿರೀಶ್, ಕೂಡಿಗೆ ಸರ್ಕಾರಿ ಪಿಯೂ ಕಾಲೇಜು ಅಭಿವೃದ್ಧಿ ಸಮಿತಿಯ ‌ಮಾಜಿ ಅಧ್ಯಕ್ಷ ‌ಕೆ.ಕೆ.ನಾಗರಾಜಶೆಟ್ಟಿ, ನ್ಯಾಯಬೆಲೆ ಅಂಗಡಿಗಳ ಪ್ರಮುಖರು
ಇಲಾಖೆಯ ಅಧಿಕಾರಿಗಳು, ನಾಗರಿಕರು ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ರಾಹಕರ ಹಕ್ಕುಗಳು, ವಸ್ತುಗಳ ಖರೀದಿಸುವ ಸಂದರ್ಭದಲ್ಲಿ ಉಂಟಾಗುವ ಮೋಸ, ವಂಚನೆಗಳ ಕುರಿತು ನಡೆದ ಸಂವಾದದಲ್ಲಿ
ನಾಗರಿಕರು ಹಾಗೂ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಮಾಹಿತಿ ನೀಡಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";