ರಾಮದುರ್ಗ: ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ ಮಳಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ವಿವಿಧ ಶಾಲೆಗಳ 30 ಕ್ಕೂ ಹೆಚ್ಚು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಪ್ರಥಮ ಸ್ಥಾನವನ್ನು ಎಮ್.ಕೆ.ಬಿ.ಎಸ್ ಸಾಲಹಳ್ಳಿ, ದ್ವಿತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಹಿರೇಕೊಪ್ಪ ಕೆ ಎಸ್, ತೃತೀಯ ಸ್ಥಾನವನ್ನು ಕೆ.ಹೆಚ್.ಪಿ.ಎಸ್ ಗುದಗೊಪ್ಪ ಹಾಗೂ ಚತುರ್ಥ ಸ್ಥಾನವನ್ನು ಎಮ್.ಪಿ.ಎಸ್ ಹುಲಕುಂದ ಶಾಲೆಯ ವಿದ್ಯಾರ್ಥಿಗಳು ಪಡೆಯುವ ಮೂಲಕ ಗಮನ ಸೆಳೆದರು.
ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ವಿ ಡಿ ದಳವಾಯಿ, ಹಿರೇಕೊಪ್ಪ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಜೇವೂರ, ವಿ ಆರ್ ಅಣ್ಣಿಗೇರಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪಿಎಂಶ್ರೀ ಸರಕಾರಿ ಶಾಲೆ ಕುನ್ನಾಳದ ವಿದ್ಯಾರ್ಥಿಗಳು ಹಲವಾರು ಮಾದರಿಗಳ ಮೂಲಕ ಪ್ರದರ್ಶನದಲ್ಲಿ ಭಾಗವಹಿಸಿ ಮೆರಗು ಹೆಚ್ಚಿಸಿದರು. ಇತರ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶಸ್ತಿ ಸುತ್ತಿಗೆ ಪರಿಗಣಿಸಲಿಲ್ಲ.
ಶಾಲೆಯ ಹಳೆಯ ವಿದ್ಯಾರ್ಥಿ ಕೃಷ್ಣಾ ಭಿಮಶೆಪ್ಪ ವರಗನ್ನವರ ತನ್ನ ಸುಪುತ್ರ ಕರ್ಣನ ಮೊದಲ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ರೂ. 3000, 2000, 1000 ಹಾಗೂ 400 ಗಳನ್ನು ಮೊದಲ ನಾಲ್ಕು ಸ್ಥಾನಗಳಿಗೆ ನಗದು ಬಹುಮಾನ ನೀಡಿದ್ದು ವಿಶೇಷವೆನಿಸಿತು.
ಭಾಗವಹಿಸಿದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಪಿಎಂಶ್ರೀ ಯೋಜನೆಯಡಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಿ ಬಿ ಹಾಲೊಳ್ಳಿ, ಈರಣ್ಣ ಸಿದ್ನಾಳ, ಶಿಕ್ಷಕರಾದ ಎಫ್ ಎನ್ ಕುರಬೇಟ, ತೇಜಸ್ವಿನಿ ಕರ್ಕಿ, ಲಕ್ಷ್ಮೀ ತಿಗಡಿ, ಈರಣ್ಣ ಸಕ್ರಿ, ಉಮೇಶ್ವರ ಮರಗಾಲ, ಕೃಷ್ಣಾ ಮಳಲಿ ಉಪಸ್ಥಿತರಿದ್ದರು.