ಅಥಣಿ: ತಾಲೂಕಿನ ಸಾಯಿಚರಣ್ ಮಗರ (09) ಅಂತಾರಾಷ್ಟ್ರೀಯ ಕರಾಟೆ 2025 ಸ್ಪರ್ಧೆಗೆ ಆಯ್ಕೆ ಆಗಿದ್ದಾನೆ.
ತಾಲೂಕಿನ ಸಾಯಿನಿಕೇತನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾಯಿಚರಣ್ ಕಳೆದ ಒಂದೂವರೆ ವರ್ಷದಿಂದ ಕರಾಟೆ ಅಭ್ಯಾಸ ಮಾಡುತ್ತಿದ್ದ. ಸದ್ಯ ಬ್ಲೂ ಬೆಲ್ಟ್ ಅನ್ನು ಕರಾಟೆಯ ಶ್ರೇಣಿಯಲ್ಲಿ ಪಡೆದಿದ್ದು, ತರಗತಿಯ ವತಿಯಿಂದ ನೇಪಾಳದ ಕಾಟ್ಮಂಡುವಿನಲ್ಲಿ ಮೇ 09 ಹಾಗೂ 10 ನೇ ತಾರೀಕಿನಂದು ಜರುಗಲಿರುವ ಅಂತರಾಷ್ಟೀಯ ಕರಾಟೆ 2025 ಸ್ಪರ್ಧೆಗೆ ಆಯ್ಕೆ ಆಗಿ, ಶೊಟೊಕಾನ್ ಶೈಲಿಯಲ್ಲಿ ಸ್ಪರ್ಧಿಸಲಿದ್ದಾನೆ.
ಸಾಯಿಚರಣ್ ಮಗರಗೆ ತಂದೆ ಅಪ್ಪು ಮಗರ, ತಾಯಿ ಸವಿತಾ ಮಗರ, ಕರಾಟೆ ಗುರುಗಳಾದ ಪ್ರೀತಮ್ ಹುನಕಾಂಡೆ ಹಾಗೂ ಸಹಪಾಠಿಗಳು ಸ್ಪರ್ಧೆಯಲ್ಲಿ ವಿಜಯಶಾಲಿ ಆಗಲಿ ಎಂದು ಶುಭ ಹಾರೈಸಿದ್ದಾರೆ.
ಸಾಯಿಚರಣ್ ಮಗರಗೆ ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಶುಭ ಹಾರೈಕೆಗಳು.