ಯಮಕನಮರಡಿ: ಕ್ಷೇತ್ರದ ಅಲದಾಳ ಗ್ರಾಮದಲ್ಲಿ 20 ಲಕ್ಷ ವೆಚ್ಚದ ನೂತನ ಅಂಗನವಾಡಿ ಕಟ್ಟಡ ಹಾಗೂ 20 ಲಕ್ಷ ಸಿಸಿ ರಸ್ತೆ ಹಾಗೂ ದಡ್ಡಿ ಗ್ರಾಮದ ಇಂದಿರಾ ನಗರದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ 10 ಲಕ್ಷದ ಸಿಸಿ ರಸ್ತೆ ಕಾಮಗಾರಿಕೆಗೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಖಂಡರಿಂದ ಚಾಲನೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ನಮ್ಮ ಸಚಿವರು ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಇಂದು ನಾವು ಅಲಧಾಳ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಹಾಗೂ ಸಿಸಿ ರಸ್ತೆ ಮತ್ತು ದಡ್ಡಿ ಗ್ರಾಮದ ಇಂದ್ರಾ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಕೆಗೆ ಇಂದು ಚಾಲನೆ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಪ್ರಮೋದ್ ರಘಶೆಟ್ಟಿ, ವೀರಪಾಕ್ಷಿ ಚೌಗಲಾ, ಭರಮಾ ಹಳ್ಳೂರಿ,
ಗ್ರಾಪಂ ಸದಸ್ಯರು ಸುನಿಲ್ ರಾ ನಾಯಕ್, ಗ್ರಾಪಂ ಸದಸ್ಯರು ಬೈರು ಪಾಟೀಲ್, ನಿಂಗಪ್ಪ ಗುರವ, ಶ್ರೀಮಂತ ಸನದಿ, ದಯಾನಂದ್ ಜಕ್ಕಾಯಿ, ರಾಜು ಇಟಗಿ, ಹಾಗೂ ಗ್ರಾಮಸ್ಥರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಕಲ್ಲಪ್ಪ ಪಾಮನಾಯಿಕ್