ಸಂಕೇಶ್ವರ :ಸನ್ 2024-25 ನೇ ಹಂಗಾಮಿನಲಿಯ ಕಾರಖಾನೆಯ ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ವರ್ಷ ರಿಯಾಯತಿ ದರದಲ್ಲಿ ಸಕ್ಕರೆ ವಿತರಿಸಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ್ ಕಲ್ಲಟ್ಟಿ ಹೇಳಿದರು.
ಅವರ ಇಂದು ಕಾರ್ಖಾನೆ ಸಭಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಸೆಪ್ಟೆಂಬರ್ 30ರವರೆಗೆ ಕಾರಖಾನೆಯ “ಅ” ಮತ್ತು “ಬಿ “ವರ್ಗದ ಸದಸ್ಯರಿಗೆ ಪ್ರತಿ ಕೆ.ಜಿಗೆ 17 ರೂಪಾಯಿ ದಂತೆ 50. ಕೆ. ಜಿ.ಸಕ್ಕರೆ
ವಿತರಿಸಲಾಗುವುದು.
ಸನ್ 2025-26 ನೇ ಸಾಲಿನಲ್ಲಿ ಕಬ್ಬು ಕತ್ತರಿಸುವ ಹಾಗೂ ಸಾರಿಗೆ ದಾರರಿಗೆ ನೆರೆ ಹೊರೆಯ ಕಾರಖಾನೆಗಳು ನೀಡುವ ದರದಂತೆ ನಮ್ಮ ಕಾರಖಾನೆಯು ದರ ನೀಡಲು ಬದ್ಧವಾಗಿದೆ ಎಂದರು ಮತ್ತು ರೈತರಿಗೆ ಕಾಂಪೋಸ್ಟ್ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಹಾಗೂ ಈಗಾಗಲೇ ಕಬ್ಬು ಪೂರೈಸಿದರೆ ಏಪ್ರಿಲ್ ಮೊದಲ ವಾರದಲ್ಲಿ ಉಳಿದ ಕಬ್ಬಿನ ಬಿಲ್ ಸಂದಾಯ ಮಾಡಲಾಗುವುದು ಎಂದರು.
ಸದರಿ ಸಾಲಿನಲ್ಲಿ ಕಾಂಪೋಸ್ಟ ಗೊಬ್ಬರದ ದರ ಪ್ರತಿ ಟನ್ನಿಗೆ 1500/-ಗೆ ಇದ್ದದ್ದನ್ನು ಈಗ ಪ್ರತಿ ಮೆ.ಟನ್ನಿಗೆ 1000/-ದರ ಘೋಷಣೆ ಮಾಡಿದ್ದೇವೆ ಅಂದ್ರು
ಈ ಸಂದರ್ಭದಲ್ಲಿ ಕಾರಖಾನೆಯ ಮಾರ್ಗದರ್ಶಕರಾದ ಮಾಜಿ ಸಂಸದರು ಅಣ್ಣಾಸಾಹೇಬ ಜೊಲ್ಲೆ , ಹಾಗೂ ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ನೇತ್ರತ್ವ ಹಾಗೂ ಮಾರ್ಗದರ್ಶನದಲ್ಲಿ ಕಾರಖಾನೆಯ ಸದಸ್ಯರಿಗೆ ಹಾಗೂ ಕಾರ್ಮಿಕ ಬಾಂಧವರಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಸುವ್ಯವಸ್ಥಿತವಾಗಿ ಕಾರಖಾನೆಯನ್ನು ನಡೆಸಿಕೊಂಡು ಹೋಗುತ್ತವೆ ಎಂದರು.
ಈ ಸಂದರ್ಭದಲ್ಲಿ ಕಾರಖಾನೆಯ ವೈಸ ಚೇಅರಮನರಾದ ಅಶೋಕ ಪಟ್ಟಣಶೆಟ್ಟಿ ಹಾಗೂ ಕಾರಖಾನೆಯ ಸಂಚಾಲಕರಾದ ಪ್ರಭುದೇವ ಪಾಟೀಲ, ಬಸ್ಸಪ್ಪಾ ಮರಡಿ, ಬಾಬಾಸಾಹೇಬ ಅರಬೋಳೆ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕರಾದ ಸಾತಪ್ಪ ಕರ್ಕಿನಾಯಿಕ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್