ಯಮಕನಮರಡಿ: ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ತಾಲ್ಲೂಕಿನಲ್ಲಿ ಬಿದ್ರೆವಾಡಿ ಗ್ರಾಮದಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ.
ಗ್ರಾಮದ ಬಸವಣ್ಣ ಗಸ್ತಿ ಹಾಗೂ ದುಂಡಪ್ಪ ಗಸ್ತಿ( ದೇವರ ಜಮೀನು) ದಲ್ಲಿ ಅಳವಡಿಸಿದ ಹಲವು ಕಂಬಗಳೂ ಅಪಾಯಕಾರಿ ಆಗಿ ವಾಲಿಕೊಂಡ ಕಂಬಗಳು, ಜೋತುಬಿದ್ದ ವಿದ್ಯುತ್ ತಂತಿಗಳಿಂದ ರೈತರು ಜೀವ ಭಯದಲ್ಲೇ ಕೆಲಸ ಮಾಡುವಂತಾಗಿತ್ತು ಈ ಕುರಿತು ನಮ್ಮೂರ ಧೋನಿ ವೆಬ್ಸೈಟ್ದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುದ್ದಿ ಮಾಡಲಾಗಿತ್ತು.
ಈ ಸುದ್ದಿ ನೋಡಿದ ಕೂಡಲೇ ಹೆಜ್ಜೆತ್ತ ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದ ವಾಲಿದ ವಿದ್ಯುತ್ ಕಂಬಗಳನ್ನು ಸರಳ ಮಾಡುವ ಕಾರ್ಯ ಆರಂಭ ಮಾಡಿದ್ದಾರೆ.
ಈ ಕುರಿತು ರೈತ ದುಂಡಪ್ಪ ಗಸ್ತಿ ಮಾತನಾಡಿದ ನಮ್ಮ ಜಮೀನಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿತ್ತು ವಿದ್ಯುತ್ ತಂತಿಗಳು ನಮ್ಮ ಕೈಗೆ ಹತ್ತುವ ಸ್ಥಿತಿಯಲ್ಲಿ ಇದ್ದವು. ಹಲವಾರು ಬಾರಿ ಸ್ಥಳೀಯ ಲೈಮನ್ ಅವರಿಗೆ ವಾಲಿರುವ ಕಂಬ ಹಾಗೂ ಜೋತುಬಿದ್ದ ತಂತಿಯನ್ನು ಮೇಲೆ ಎತ್ತಲು ತಿಳಿಸಿದ್ದೇವೆ ಆದರೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿರಲಿಲ್ಲ.
ಈ ಕುರಿತು ನಮ್ಮೂರ ಧ್ವನಿಯ ವೆಬ್ಸೈಟ್ ವರದಿಗಾರ ಬಂದು ಈ ಸುದ್ದಿ ಮಾಡಿದ ಕೂಡಲೇ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳು ಬಂದು ವಾಲಿದ ಕಂಬಗಳನ್ನು, ಸರಳ ಮಾಡಿ ಮತ್ತು ಜೋತುಬಿದ್ದ ತಂತಿಗಳನ್ನು ಮೇಲಕ್ಕೆ ಎತ್ತಿದ್ದಾರೆ ಮುಂದೆ ಆಗುವ ಅನಾಹುತಗಳನ್ನು ತಬ್ಬಿಸಿದ್ದಾರೆ ಇದಕ್ಕೆ ಪ್ರಜಾ ಪ್ರಗತಿ ಪತ್ರಿಕೆ ಹಾಗೂ ವರದಿಗಾರರಿಗೆ ಧನ್ಯವಾದ ಸಲ್ಲಿಸಿದ ರೈತರು ಬಸವಣ್ಣಿ ಗಸ್ತಿ, ಹಾಗೂ ದುಂಡಪ್ಪ ಗಸ್ತಿ.
ವರದಿ:ಕಲ್ಲಪ್ಪ ಪಾಮನಾಯಿಕ