Live Stream

[ytplayer id=’22727′]

| Latest Version 8.0.1 |

Local NewsState News

ಪಿಕೆಪಿಎಸ್ ಸಂಘದ ಸಭಾಭವನದಲ್ಲಿ ರೈತರ ತುರ್ತು ಸಭೆ; ಉಳ್ಳಾಗಡ್ಡಿ ಖಾನಾಪೂರದಲ್ಲಿ ಇನ್ನೊಂದು ಪಿಕೆಪಿಎಸ್ ಸಂಘ ಬೇಡ: ಸಭೆಯಲ್ಲಿ ರೈತರ ಅವಿರೋಧ ವ್ಯಕ್ತ…!

ಪಿಕೆಪಿಎಸ್ ಸಂಘದ ಸಭಾಭವನದಲ್ಲಿ ರೈತರ ತುರ್ತು ಸಭೆ; ಉಳ್ಳಾಗಡ್ಡಿ ಖಾನಾಪೂರದಲ್ಲಿ ಇನ್ನೊಂದು ಪಿಕೆಪಿಎಸ್ ಸಂಘ ಬೇಡ: ಸಭೆಯಲ್ಲಿ ರೈತರ ಅವಿರೋಧ ವ್ಯಕ್ತ…!

ಹುಕ್ಕೇರಿ: ಉಳ್ಳಾಗಡ್ಡಿ ಖಾನಾಪೂರದಲ್ಲಿ ೧೯೩೨ರಲ್ಲಿ ಸ್ಥಾಪನೆ ಮಾಡಿದ ಪಿಕೆಪಿಎಸ್ ಸಂಘಯನ್ನು ನಮ್ಮ ಪೂರ್ವಜರು ಹುಟ್ಟುಹಾಕಿದ್ದಾರೆ ಆದ್ದರಿಂದ ಗ್ರಾಮದಲ್ಲಿ ಸಂಘದ ವಿರೋಧಿಗಳು ಇನ್ನೊಂದು ಪಿಕೆಪಿಎಸ್ ಸಂಘ ಮಾಡಲು ಮುಂದಾಗಿದ್ದಾರೆ ಅದು ಬೇಡ ಗ್ರಾಮದಲ್ಲಿ ಮೊದಲಿನಿಂದ ಒಂದು ಪಂಚಾಯತಿ, ಒಂದು ಪಿಕೆಪಿಎಸ್ ಸಂಘ ಮಾತ್ರ ಇದೆ ನಾವು ಯಾವುದೇ ಕಾರಣಕ್ಕೂ ಹೊಸ ಸಂಘ ಸ್ಥಾಪನೆಗೆ ಅವಕಾಶ ನೀಡುವದಿಲ್ಲಾ ಎಂದು ಉಳ್ಳಾಗಡ್ಡಿ ಖಾನಾಪೂರದ ನೂರಾರು ರೈತರು ತಮ್ಮ ವಿರೋಧ ವ್ಯಕ್ತಪಡಿಸಿದರು.

          ತಾಲೂಕಿನ ಸಮೀಪದ ಉಳ್ಳಾಗಡ್ಡಿ ಖಾನಾಪೂರದ ಪ್ರಾಥಮಿಕ ಕೃಪಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ರೈತರ ತುರ್ತು ಸಭೆಯಲ್ಲಿ ಸಂಘದ ಅಧ್ಯಕ್ಷ ಮಹಾರುದ್ರ ಜಿರಳಿ ಮಾತನಾಡಿ ಗ್ರಾಮದ ರೈತರು ಇಂದು ನಿಮ್ಮ ಆಡಳಿತ ಬೇಡ ಎಂದರೆ ನಾವೇ ಎಲ್ಲರೂ ರಾಜಿನಾಮೆ ನೀಡಲು ಸಿದ್ದ ಆದರೆ ಸಂಘಕ್ಕೆ ವಿರೋಧ ಮಾಡುವವರಿಗೆೆ ಒಂದು ಕಿವಿ ಮಾತು ತಾವು ಇನ್ನೊಂದು ಸಂಘ ಸ್ಥಾಪನೆ ಮಾಡುವದನ್ನು ಬಿಡಿ ಇದೇ ಸಂಘವನ್ನು ನಡೆಸಿಕೊಂಡು ಹೋಗಿ ನಮ್ಮ ಎಲ್ಲ ಸದಸ್ಯರು ರಾಜಿನಾಮೆ ನೀಡಲು ಸಿದ್ದ ಎಂದು ವಿರೋಧಿಗಳಿಗೆ ಸವಾಲ ಹಾಕಿದರು. ತಾವು ಮಾತು ಕಥೆ ಬನ್ನಿ ಒಂದು ಊರಲ್ಲಿ ಎರಡು ಸಂಘಗಳು ಬೇಡ ಇದ್ದರಿಂದ ರೈತರಿಗೆ ಅನ್ಯಾಯವಾಗುವದು. ನಾವೆ ಮನೆಗೆ ಹೋಗುತ್ತೇವೆ ನೀವು ಸಂಘವನ್ನು ಉನ್ನತ್ತಿಕರಣ ಮಾಡಿ ಎಂದು ಕರೆ ನೀಡಿದರು.

          ಉಳ್ಳಾಗಡ್ಡಿ ಖಾನಾಪೂರದ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಕಾoತ ಪಾಟೀಲ ಮಾತನಾಡಿ, ಪಿಕೆಪಿಎಸ್ ಸಂಘದಿoದ ನಮ್ಮ ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಬರುವ ವರ್ಷದಲ್ಲಿ ೪ಗುಂಟೆ ಜಾಗದಲ್ಲಿ ದೊಡ್ಡ ಪ್ರಮಾಣದ ಗೊಬ್ಬರ ಇಡಲು ಗೋದಾಮ ನಿರ್ಮಾಣ ಗುರಿ ಸಂಘದಾಗಿದೆ. ಸಂಘವು ಮೊದಲ ೩೫ ಲಕ್ಷ ರೂ. ಪತ್ತ ರೈತರಿಗೆ ನೀಡುತ್ತಾ ಇದ್ದರು ಆದರೆ ಇಂದು ೭.೩೬ ಕೋಟಿ.ರೂಗಳ ಪತ್ತ ರೈತರಿಗೆ ನೀಡಲು ಸಚಿವ ಸತೀಶ ಜಾರಕಿಹೊಳಿ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿಯವರ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಈ ಹಿಂದೆ ಗ್ರಾಮದಲ್ಲಿ ಪಿಕೆಪಿಎಸ್ ಸಂಘ ಸ್ಥಾಪನೆ ಮಾಡುತ್ತೇವೆ ಎಂದು ಕೇಲ ಕೀಡಿಗೇಡಿಗಳು ಆರಂಭಿಸಿದರು ಗ್ರಾಮ ಜನರು ಸೇರಿ ಅದಕ್ಕೆ ವಿರೋಧ ವ್ಯಕ್ತಪಡಿಸಿ ಅದನ್ನು ತೆಡೆಹಿಡಿದರು. ಅದು ಅಲ್ಲದೇ ಉ-ಖಾನಾಪೂರದಲ್ಲಿ ಇನ್ನೊಂದು ಹೊಸ ಪಿಕೆಪಿಎಸ್ ಸಂಘ ಬೇಡ ಅಂತಾ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದರು.

           ಈ ಸಭೆಯಲ್ಲಿ, ಶೀಲವಂತ ದೇವರಮನಿ, ಪರಶುರಾಮ ದುಡಗಿದಾಸ, ಹಣಮಂತಗೌಡಾ ಪಾಟೀಲ, ಮಲ್ಲಪ್ಪಾ ಮಾಳಗಿ, ರಾಜು ಅವಟೆ, ಮುರಗೇಶ ಹಿರೇಮಠ, ಸುಭಾಸ ಹೆಬ್ಬಾಳಿ, ಶಾಂತುಗೌಡಾ ಪಾಟೀಲ, ಕುಮಾರ ತಳವಾರ, ಪರಪ್ಪ ರಾಮನಕಟ್ಟಿ, ಹುಸೇನ ಗಜಬೀರ, ಮಹಾವೀರ ಅವಟೆ, ಜೆ.ವಿ.ಕುಲಕರ್ಣಿ ಹಾಗೂ ನೂರಾರು ರೈತರು ಇದ್ದರು.

ವರದಿ:ಕಲ್ಲಪ್ಪ ಪಾಮನಾಯಿಕ್

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";