ಗೋಕಾಕ: ತಾಲೂಕಿನ ದತ್ತು ಗ್ರಾಮ ಕುಂದರಗಿಯ ಶ್ರೀ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ ಹಿಡಕಲ್ ಡ್ಯಾಮ್ ಇವುಗಳ ಸಂಯುಕ್ತ ಆಶ್ರಯದಲ್ಲಿ, ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಶ್ರೀಮಠದ ಪರಮ ಪೂಜ್ಯರಾದ ಮ.ನಿ.ಪ್ರ.ಡಾ. ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ಅಡವಿ ಸಿದ್ದೇಶ್ವರ ಮಠ ಅಂಕಲಗಿ, ಕುಂದರಗಿ ಇವರ ಸಹಕಾರದಲ್ಲಿ ಕುಂದರಗಿ ಮಠದ ವ್ಯವಸ್ಥಾಪಕರಾದ ಶ್ರೀ ಶಿವಲಿಂಗಪ್ಪ ದೊಡವಾಡಮಠ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳ ಪ್ರತಿಯೊಂದು ಹಂತದಲ್ಲೂ ಬದಲಾವಣೆ ತರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಮ್.ಅಂಗಡಿ ಅವರು ಏಳು ದಿನಗಳ ಕಾಲ ನಡೆಯುವ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮಗಳನ್ನು ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಬಿ.ಎಸ್.ತಳವಾರ, ಸಿಬ್ಬಂದಿಗಳಾದ ಎಮ್.ಕೆ.ಹಮ್ಮಣ್ಣವರ, ಎಸ್.ಟಿ.ವಡ್ಡರ,ಎಸ್.ಕೆ.ಜಕ್ಕಾನಟ್ಟಿ.ಎ.ಎಚ್.ಸುಂಬಳಿ,ಎಸ್.ಡಿ.ಬಾಳಪ್ಪಗೋಳ. ವಿದ್ಯಾರ್ಥಿಗಳು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಎಸ್.ಕೆ.ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎ.ದ್ವೀತಿಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿನಿಯರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ ಚೌಗಲಾ ಹಾಗೂ ಸ್ವಾತಿ ಚೌಗಲಾ ಜಂಟಿಯಾಗಿ ವಂದಿಸಿದರು. ಲಕ್ಷ್ಮಿ ಶಿಂಗೆ ಹಾಗೂ ಸುಶ್ಮೀತಾ ಕಮತಿ ನಿರೂಪಿಸಿದರು.
ವರದಿ:ಎ.ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ