ಹುಕ್ಕೇರಿ: ಎನ್.ಎಸ್ .ಎಸ್. ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಸರ್ವ ಗುಣಗಳನ್ನು ಕಲಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆಂತರಿಕ ಮತ್ತು ಬಾಹ್ಯ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಬಿ.ಎಸ್ ಮಾನೆ ಅಭಿಪ್ರಾಯ ಪಟ್ಟರು.
ಅವರು ಬೆಳಗಾವಿ ಜಿಲ್ಲೆಯ ಕುಂದರಗಿ ಗ್ರಾಮದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ -ಹಿಡಕಲ್ ಡ್ಯಾಮ ಇವುಗಳ ಸಯುಕ್ತ ಆಶ್ರಯದಲ್ಲಿ 2024- 25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕಿಯರಾದ ಅಕ್ಷತಾ ಹಿರೇಮಠ ಹಾಗೂ ಅನುಶಾ ಮಹಾಗುರುಮಠ ಅವರು ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು.
ಸಮಾರೋಪ ಭಾಷಣವನ್ನು ಮಾಡಿದ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಎ. ವೈ ಸೋನ್ಯಾಗೋಳ ಮಾತನಾಡಿ ಏಳು ದಿನಗಳವರೆಗೆ ಜರುಗಿದ ವಾರ್ಷಿಕ ವಿಶೇಷ ಶಿಬಿರಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ ಶ್ರೀ ಮಠದ ಭಕ್ತರಿಗೆ ಅಮರಸಿದ್ದೇಶ್ವರ ಸ್ವಾಮೀಜಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಉಪನ್ಯಾಸಕರಾದ ಜೀವನ ಹೊಸಮನಿ, ಎಂ.ಕೆ.ಹಮ್ಮನವರ ಮಾತನಾಡಿದರು.
ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಿಲ ತಳವಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಏಳು ದಿನಗಳ ಕಾಲ ಜರುಗಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನ ,ಯೋಗಾಸನ ವಿವಿಧ ವಿಷಯಗಳು ಉಪನ್ಯಾಸ ಮಾಲಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಬಿ.ಎಸ್ ತಳವಾರ, ಉಪನ್ಯಾಸಕರಾದ ಎಫ್. ಎನ್. ಸೈಯ್ಯದ, ಪಿ.ಎ ತಳವಾರ, ಎಸ್. ಕೆ ಜಕ್ಕಾನಟ್ಟಿ, ಆರ್. ಕೆ. ಕುರ್ಣಿ, ಎ.ಎಚ್. ಸುಂಬಳಿ, ಎಸ್ .ಡಿ .ಬಾಲಪ್ಪಗೋಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಬಿಎ/ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಿ .ಎ./ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರು ಎನ್ .ಎಸ್ ಎಸ್ ಗೀತೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯಾದ ಸುಧಾ ತಳವಾರ ಹಾಗೂ ಪೂರ್ಣಿಮಾ ಹಿರೇಮಠ್ ಜಂಟಿಯಾಗಿ ಸ್ವಾಗತ ಹಾಗೂ ಪುಷ್ಪಾರ್ಪಣೆ ಕಾರ್ಯಕ್ರಮ ನಡೆಸಿದರು. ಲಕ್ಷ್ಮಿ ಶಿಂಗೆ ಶಿಬಿರದ ವರದಿಯನ್ನು ವಾಚಿಸಿದರು ವಿಜಯಲಕ್ಷ್ಮಿ ಚೌಗುಲಾ ಕಾರ್ಯಕ್ರಮ ನಿರೂಪಿಸಿದರು.
ವರದಿ:ಎ.ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ