ಬೆಳಗಾವಿ: ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಚೇತನಾ ಫೌಂಡೇಶನ್ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿಯವರ ಸಹಯೋಗದಲ್ಲಿ ಬೆಳಗಾವಿ ನುಡಿ ಸಡಗರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಜ್ಯೋತಿ ಬದಾಮಿ ಯವರು
15 ನೇ 16ನೆ ಶತಮಾನದಲ್ಲಿ ಶಿವಾಜಿ ಮಹಾರಾಜರ ಮಹಿಳೆಯರು ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಸಂಘಟನೆಗಳನ್ನ ಮಾಡಿದ್ದು ಮಹಿಳಾ ಶಕ್ತಿ. ಗಾಂಧೀಜಿಯವರ ಬೆಳಗಾವಿಯ ಅಧಿವೇಶನದಲ್ಲಿ ಸಹ ಮಹಿಳೆಯರ ಸಂಘಟಣೆಗಳನ್ನ ನಾವು ನೋಡಬಹುದು. ಹೀಗೆ ಮಹಿಳೆಯರು ತಮ್ಮನ್ನ ಎಲ್ಲದರಲ್ಲೂ ಪಾಲ್ಗೊಳ್ಳುವಿಕೆಯೊಂದಿಗೆ ಮಹಿಳೆಯರ, ಸ್ತ್ರೀ ಶಕ್ತಿ ಏನು ಎಂಬುದನ್ನ ತಿಳಿಸಿಕೊಟ್ಟಿದ್ದಾರೆ. ಹಾಗೂ ನಮ್ಮ ಬೆಳಗಾವಿಯ ಮಹಿಳಾ ಲೇಖಕಿಯರ ಸಂಘ ಇದೆ ತರಹ ನಮ್ಮ ಕನ್ನಡದ ಬಾವುಟವನ್ನು ವಿವಿಧ ಭಾಗಗಳಲ್ಲಿ ರಾರಾಜಿಸುವ ಹಾಗೆ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ, ಕಾವ್ಯವಾಚನ, ಚಿಂತನ-ಮಂಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೊತೆಗೆ ವಿವಿಧ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ, ಐತಿಹಾಸಿಕ ಕದಂಬರಿಕಾರರು ಯ.ರು.ಪಾಟೀಲ, ಉಪನ್ಯಾಸ ನೀಡಿದ ನಾಟಕಕಾರರು, ಚಲನಚಿತ್ರ ನಟರಾದ ಡಾ.ಡಿ.ಎಸ್.ಚೌಗುಲೆ, ಅಧ್ಯಕ್ಷರು ಕನ್ನಡ ಸಂಘಗಳ ಒಕ್ಕೂಟ ಅಶೋಕ ಚಂದರಗಿ, ಕ.ಸಾ.ಪ ತಾಲೂಕ ಅಧ್ಯಕ್ಷರು ಮೂಡಲಗಿ ಡಾ.ಸಂಜಯ ಸಿಂಧಿಹಟ್ಟಿ, ಧಾರವಾಡ ಉಪನ್ಯಾಸಕರು ಶರಣು ಚಿಕ್ಕನಗೌಡ್ರ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಬದಾಮಿ, ಚಂದನ ವಾಹಿನಿ ನಿರೂಪಕರು, ಲೇಖಕಿ ಬೆಳಗಾವಿ ಶ್ರೀಮತಿ ಸರ್ವಮಂಗಳಾ ಅರಳಿಮಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.