Live Stream

[ytplayer id=’22727′]

| Latest Version 8.0.1 |

Local NewsNational NewsState News

ಆಪರೇಷನ್ ಸಿಂಧೂರ: ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಹರಿದು ಬಂದ ಜನಸಾಗರ

ಆಪರೇಷನ್ ಸಿಂಧೂರ: ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಹರಿದು ಬಂದ ಜನಸಾಗರ

ಆಂಧ್ರಪ್ರದೇಶ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಭಾಗವಾಗಿ ನಡೆದ ಪಾಪಿ ಪಾಕಿಸ್ತಾನದ ವಿರುದ್ಧದ ಸೆಣೆಸಾಟದಲ್ಲಿ ಬಾಗೇಪಲ್ಲಿ ಗಡಿಭಾಗಕ್ಕೆ ಸಮೀಪದ ರಾಜ್ಯದ ಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾ ಗ್ರಾಮಕ್ಕೆ ಸೇರಿದ ಯೋಧ ಮುರಳಿ ನಾಯಕ್‌ (25) ಹುತಾತ್ಮರಾಗಿದ್ದು, ಹುತಾತ್ಮ ಯೋಧನ ಪಾರ್ಥಿವ ಶರೀರ ತರುವ ಸಂದರ್ಭದಲ್ಲಿ ಹೆದ್ದಾರಿ 44 ರ ಬಾಗೇಪಲ್ಲಿ ಗಡಿಯಿಂದ ಹಿಡಿದು ಕಲ್ಲಿ ತಾಂಡದ ವರೆಗೂ ಜನಸಾಗರವೇ ರಸ್ತೆಬದಿಗಳಲ್ಲಿ ಹರಿದುಬಂದು ಕಣ್ಣೀರಧಾರೆಯನ್ನು ಅರ್ಪಿಸಿತು.

ದೇಶ ಸೇವೆಯ ಕಿಚ್ಚಿನೊಂದಿಗೆ ಸೇನೆಗೆ ಸೇರಿದ ಮುರಳಿ ನಾಯಕ್ ವೀರ ಮರಣ ಅಶ್ರು ತರ್ಪನ ಸಲ್ಲಿಸಿದ ಜನಸಾಗರ ದೇಶದ ಸೇವೆಗಾಗಿ, ಮಿಲಿಟರಿ ಸಮವಸ್ತ್ರ ಬಾಗೇಪಲ್ಲಿ ಗಡಿಯಿಂದ ಗುಮ್ಮಯ್ಯಗಾರಿಪಲ್ಲಿ ಕ್ರಾಸ್ (ಗೋರಂಟ್ಲ ಕ್ರಾಸ್) ಮೂಲಕ ಪುಟ್ಟಪರ್ತಿಗೆ ಹೋಗುವ ಮಾರ್ಗ ಮಧ್ಯೆ ಎಡಕ್ಕೆ ತಿರುಗಿ 2 ಕಿಮೀ ಸಂಚರಿಸಿದರೆ 40 ಮನೆಗಳು ಮತ್ತು 180 ಜನಸಂಖ್ಯೆ ಇರುವ ಪುಟ್ಟ ಕಲ್ಲಿತಾಂಡ ಗೋಚರಿಸುತ್ತದೆ.

ಕಡುಬಡತನದಿಂದ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ, ಶ್ರೀರಾಮುಲು ನಾಯಕ್ ಮತ್ತು ಜ್ಯೋತಿ ಬಾಯಿ ದಂಪತಿಗಳಿಗೆ ಒಬ್ಬನೇ ಮಗ ಮುರಳಿ ನಾಯಕ್ ಅನಂತಪುರದಲ್ಲಿ ಪದವಿಯನ್ನು ವ್ಯಾಸಂಗ ಮಾಡುವ ಸಮಯದಲ್ಲಿಯೇ ಸೇನೆ ಸೇರಬೇಕೆಂಬ ಅಭಿಲಾಷೆಯನ್ನು ಇಟ್ಟುಕೊಂಡಿದ್ದ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ತಂದೆ ತಾಯಿಗೆ ಕೂಲಿ ಜೊತೆ ಇದ್ದುದು ಕೇವಲ ಎಕರೆ ಜಮೀನು ಮಾತ್ರ. ಇಂತಹ ಸಂದರ್ಭದಲ್ಲಿ ಒಮ್ಮೆಲೇ ಸೇನೆಯಲ್ಲಿ ಸೇವೆ ಮತ್ತು ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವಂತಹ ಸಂದರ್ಭಗಳು ಒದಗಿಬಂದರೂ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸೇನೆಯ ಸೇವೆ. ಕಾರಣ ಸೇನಾ ಸಮವಸ್ತ್ರದಲ್ಲಿ ದೇಶ ಸೇವೆ ಮಾಡಬೇಕೆಂಬ ಮಹದಾಸೆ. ಎಂದಾದರೂ ಸಾವು ಬಂದರೂ ನಮ್ಮ ಮೈಮೇಲೆ ರಾಷ್ಟ್ರಧ್ವಜ ಹೊದೆಸಬೇಕೆಂಬ ಬಯಕೆಯಿಂದಲೇ 22 ನೆ ವರ್ಷಕ್ಕೆ ಸೇನೆಗೆ ಮುರಳಿ ನಾಯಕ ಸೇರಿದ್ದ.

ಕಲ್ಲಿ ತಾಂಡದಲ್ಲಿ ಜನಸಂದಣಿ:

ಇಡೀ ದೇಶದ ಗಮನವನ್ನು ಸೆಳೆದಿರುವ ಕಲ್ಲಿತಾಂಡ ಅಮರಯೋಧ ಮುರಳಿ ನಾಯಕ ಪಾರ್ಥಿವ ಶರೀರ ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಎಲ್ಲಾ ಕಡೆ ಜನರು ಮುರುಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು, ಎಲ್ಲಾ ಕಡೆ ಜೈಹೋ ಮುರಳಿ ನಾಯಕ್, ಅಮ‌ರ್ ರಹೇಘೋಷಣೆ ಕೇಳಿಬಂದವು. ಚಿಕ್ಕಬಳ್ಳಾಪುರ, ಪರೇಸಂದ್ರ, ಬಾಗೇಪಲ್ಲಿ ಟೋಲ್ ಫ್ಲಾಜ, ಕೊಂಡಿಕೊಂಡ ಚೆಕ್ ಪೋಸ್ಟಗಳ ಬಳಿ ನೂರಾರು ಸಂಖ್ಯೆಯನ್ನು ಜನರು ಸೇರಿ ವೀರಯೋಧನಿಗೆ ಗೌರವ ಸಲ್ಲಿಸಿದರು.

ಕಲ್ಲಿತಾಂಡ ಗ್ರಾಮಕ್ಕೆ ನೂರಾರು ಸಂಖ್ಯೆಯಲ್ಲಿ ಕೊಡುವ ಆ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಆಗಮಿಸಿ ಯೋಧನ ಕುಟುಂಬಕ್ಕೆ ಸಾಂತನ ಹೇಳುತ್ತಿದ್ದುದು ಸಾಮಾನ್ಯ ದೃಶ್ಯವಾಗಿದ್ದು, ಭಾನುವಾರ ಸೇನೆಯಿಂದ ಗೌರವ ಸಮರ್ಪಣೆ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಡಿಸಿಎಂ ಪವನ್ ಕಲ್ಯಾಣ್, ಸೇರಿ ಹಲವು ಸಜವ ಸಚಿವವಾರಾ ಲೋಕೇಶ್ ಭಾಗವಹಿಸಲಿದ್ದಾರೆ. ಸತ್ಯಸಾಯಿ ಜಿಲ್ಲಾಡಳಿತ ಸಕಲ ಸಿದ್ದತೆ ಮತ್ತು ಅಗತ್ಯ ಭದ್ರತೆಯನ್ನು ಮಾಡಿಕೊಳ್ಳುತಿದೆ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಗಣ್ಯಾತಿ ಗಣ್ಯರು ಭಾಗವಹಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಲ್ಲಿ ತಾಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಯೋಜನೆ ಮಾಡಲಾಗಿದೆ.

ಸಂದರ್ಭದಲ್ಲಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ರವರಿಂದ ಗೌರವ ಸಲ್ಲಿಕೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆದ್ದಾರಿ ಮೂಲಕ ಬಾಗೇಪಲ್ಲಿ ಸಮೀಪದ ಟೋಲ್ ಪ್ಲಾಜಾ ಬಲಿ ಆಗಮಿಸಿದ ಅಮರ ಯೋಧ ಮುರುಳಿನಾಯಕ್ ಪಾರ್ಥವ ಶರೀರಕ್ಕೆ ಗೌರವ ಸಲ್ಲಿಸಲು ಜನ ಸಾಗರವೇ ಹರಿದು ಬಂದಿತ್ತು ಶಾಸಕ ಸುಬ್ಬರೆಡ್ಡಿ ಸೇರಿದಂತ ಅನೇಕ ಮುಖಂಡರು ಜನಪ್ರತಿನಿಧಿಗಳು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಕೆ ಕಂಪನಿ ಮಿಡಿದರು.

ವರದಿ:ಕಲ್ಲಪ್ಪ ಪಾಮನಾಯಿಕ್

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";