ಮಧ್ಯಪ್ರದೇಶ: ವಖ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ದೇಶದ ಹಲವೆಡೆ ಕಳೆದ ಮರ್ನಾಲ್ಕು ದಿನಗಳಿಂದಲೂ ಈ ನಡೆಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಮೊನ್ನೆಯಷ್ಟೇ ರಂಜಾನ್ ಹಬ್ಬದ ದಿನದಂದೂ ಸಹ ಮುಸ್ಲಿಮರು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ವಖ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದರು.
ಹೀಗೆ ವಖ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧವನ್ನು ಪಡೆದುಕೊಂಡಿತ್ತು. ಆದರೆ, ಇಂದು ಮಸೂದೆ ಮಂಡನೆಯಾಗುವ ವೇಳೆ ಮುಸ್ಲಿಂ ಮಹಿಳೆಯರು ವಖ್ಫ್ ತಿದ್ದುಪಡಿ ಮಸೂದೆಗೆ ಬೆಂಬಲವನ್ನು ವ್ಯಕ್ತಪಡಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದಿದೆ. ರಸ್ತೆ ಮಧ್ಯೆ ಮೋದಿ ಭಾವಚಿತ್ರದ ಮೇಲೆ ನಾವು ಮೋದಿ ಬೆಂಬಲಿಸುತ್ತೇವೆ, ನಾವು ವ ತಿದ್ದುಪಡಿ ಮಸೂದೆ ಬೆಂಬಲಿಸುತ್ತೇವೆ ಎಂಬ ಬರಹಗಳುಳ್ಳ ಬೋರ್ಡ್ ಗಳನ್ನು ಹಿಡಿದು ಮೋದಿ ಜೀ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
Video: