ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ನಡೆದ ಅವಘಡ ಇದಾಗಿದ್ದು, ಬಸ್‌ನಿಂದ ಕೆಳೆಗಿಳಿಯುವಾಗ ಆಯತಪ್ಪಿ ಬಿದ್ದ ಪರಿಣಾಮ KSRTC ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ನಿಡಸೋಸಿ ಗ್ರಾಮದ ದುಂಡಯ್ಯ ರಾಚಯ್ಯ ಕಮತೆ (42) ಮೃತ ದುರ್ದೈವಿ. ಸಂಕೇಶ್ವರದಿಂದ ಸ್ವಗ್ರಾಮ ನಿಡಸೋಸಿ ಬಂದಾಗ ಬಸ್ಸ್ ಇಳಿಯುವಾಗ ಆಯತಪ್ಪಿ ಬಿದ್ದ ರಾಚಯ್ಯ ಹೊರಡುತ್ತಿದ್ದ ಬಸ್ಸಿನ ಹಿಂಭಾಗದ ಚಕ್ರದಲ್ಲಿ ತಲೆ ಸಿಲುಕಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದರು, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.