ಬೆಳಗಾವಿ: ಪತಂಜಲಿ ಯೋಗ ಸಮಿತಿಯ ಗುರುಗುಳು ಹಾಗೂ ಸದಸ್ಯರು ಬೆಳಗಾವಿಯ ಮಾಳುಮಾರುತಿ ಬಡಾವಣೆ ಶ್ರಿನಗರದ ವತಿಯಿಂದ ಮಾನವೀಯತೆ ಮೆರೆದಿದ್ದಾರೆ. ಇವರು ನಾಗನೂರಿನ ಶಿವಬಸವ ಮಹಾಸ್ವಾಮಿಗಳ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮಕ್ಕೆ ಭೇಟಿಕೊಟ್ಟು, ವೃದ್ಧರ ಯೋಗಕ್ಷೇಮ ವಿಚಾರಿಸಿ, ದಿನನಿತ್ಯದ ಅಗತ್ಯ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭ, ವೃದ್ಧಾಶ್ರಮದ ಹಿರಿಯ ನಾಗರಿಕರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಯೋಜಕರಾದ, ಎಂ. ಎಸ. ಚೌಗಲಾ ಅವರು ಈ ಹೃದಯ ಸ್ಪರ್ಶಿ ಸೇವೆಗಾಗಿ ಪತಂಜಲಿ ಯೋಗ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಸಂಯೋಜಕರಾದ ಎಂ. ಎಸ. ಚೌಗಲಾ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವೈಜಯಂತಿ ಎಂ.ಚೌಗಲಾ, ಪತಂಜಲಿ ಯೋಗ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರಾದ ರಮೇಶ್ ಮಹಡಿಕ್, ಶ್ರೀಮತಿ ರೂಪಾ ಮಹಡಿಕ್, ಅನೀಲ ಪಾಟೀಲ, ಶ್ರೀಮತಿ ಅಕ್ಷತಾ ಪಾಟೀಲ, ಭರಮಪ್ಪ ಪರಸಣ್ಣವರ್, ಶ್ರೀಮತಿ ಸುಲೋಚನಾ ಇಟಗಿ, ಶ್ರೀಮತಿ ಸುವರ್ಣಾ ಕಟ್ಟಿ, ಗುರುಲಿಂಗ ಚರಾಟೆ, ರೇಖಾ ಪಾಟೀಲ, ಲಕ್ಷ್ಮಿ ಸಾಣಿಕೊಪ್ಪ ಹಾಗೂ ಮುಂತಾದವರು ಮೊದಲಾದವರು ಉಪಸ್ಥಿತರಿದ್ದರು.
ಈ ಸೇವಾ ಕೃತ್ಯವು ಇತರರಿಗೆ ಪ್ರೇರಣಾದಾಯಕವಾಗಿದ್ದು, ಸಮಾಜದಲ್ಲಿ ಹೃದಯದಳದಿಂದ ಸೇವೆ ಸಲ್ಲಿಸುವ ಮಹತ್ವವನ್ನು ಮತ್ತೊಮ್ಮೆ ಮುಂದಿಟ್ಟಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143