ನಿಸ್ವಾರ್ಥ ಸಮಾಜ ಸೇವಕರು ಸದಾ ಇತರರ ಒಳಿತನ್ನೇ ಬಯಸುವ ಶ್ರೀಯುತ ಗೋವಿತ್ ಕಿರಣ್ ಇವರ ಬಗ್ಗೆ ಹೇಳಲು ತುಂಬಾ ಹೆಮ್ಮೆ ಅನಿಸುತ್ತದೆ. ಇಂತಹ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡುತ್ತಿರುವ ಇವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಹೈಸ್ಕೂಲು ಓದುತ್ತಿರುವಾಗಲೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡ ಇವರು ಸ್ವಯಂ ಸೇವಾ ಸಂಸ್ಥೆಗಳಲಿ ಸ್ವಯಂ ಸೇವಕರಾಗಿ ಸಮಾಜ ಸೇವಾ ಕ್ಷೇತ್ರಕ್ಕೆ ಧುಮುಕಿದರು. ಮುಂದೆ ಪದವಿ ಪೂರ್ವ ಹಾಗೂ ನಂತರ ಹಂತಗಳಲ್ಲಿ ಕಾಲೇಜು ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಮ್ಮ ಪದವಿ ಮುಗಿದ ನಂತರ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಸಮಾಜ ಕಾರ್ಯ ಅಧ್ಯಯನ ವಿಭಾಗ (MSW)ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎರಡು ಸಮಾಜ ಸೇವೆ ಮಾಡಲು ಬೇಕಾಗುವ ಕೌಶಲ್ಯ ಮತ್ತು ತರಬೇತಿಯನ್ನು ಪಡೆದರು.
ಕಾಲೇಜು ದಿನಗಳಿಂದ ಎನ್ ಎಸ್ ಎಸ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಶಿಬಿರಗಳಲ್ಲಿ ಭಾಗವಹಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಆಸಕ್ತಿ ಹೆಚ್ಚಿತು.
ನಂತರ ಉನ್ನತ ವಿದ್ಯಾಭ್ಯಾಸವನ್ನು ಸಮಾಜ ಕಾರ್ಯ ಕ್ಷೇತ್ರದಲ್ಲಿ ಪಡೆದು ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಕರ್ನಾಟಕ, ಕೇರಳ ತಮಿಳುನಾಡು ರಾಜ್ಯದ ರಾಜ್ಯ ಸಂಯೋಜಕನಾಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯಕ್ಕೆ ದಾನಿಗಳ ನೆರವಿನಿಂದ ವೈಯಕ್ತಿಕವಾಗಿ 7 ರಿಂದ 8 ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳಾದ ಜಾಮಿಟ್ರಿ ಬಾಕ್ಸ್, ಪೆನ್ಸಿಲ್, ವಾಟರ್ ಬಾಟಲ್, ಐಡಿ ಕಾರ್ಡ್ ವಿತರಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.
100ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಹಾಯಕ ಬರಹಗಾರನಾಗಿ ಅವರು ಪರೀಕ್ಷೆ ಬರೆದಿದ್ದಾರೆ.
ಇವರ ಸೇವೆಯನ್ನು ಗುರುತಿಸಿ
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ(ರಿ) ವೇದಿಕೆಯ 14ನೇ ವರ್ಷದ ವಾರ್ಷಿಕೋತ್ಸವ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ ಮೀಸಲಾತಿಯ 106 ರ ಸಂಭ್ರಮಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಶ್ರೀಮತಿ ಯಶೋಧರಮ್ಮ ದಾಸಪ್ಪ ಪ್ರಶಸ್ತಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸೇವಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶ್ರೀಯುತ ಗೋವಿತ್ ಕಿರಣ್ ರವರ ಸಮಾಜ ಸೇವೆಯನ್ನು ಗುರುತಿಸಿ ದಿ.ಮೇ 09, 2025ರಂದು ಕನ್ನಡ ಸಾಹಿತ್ಯ ಪರಿಷತ್ ಭವನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ ವಿಜಯನಗರ 1ನೇ ಹಂತ, ಮೈಸೂರು ಇಲ್ಲಿ ರಾಜ್ಯ ಮಟ್ಟದ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಇವರ ಈ ಸಮಾಜ ಸೇವೆ ಹಾಗೂ ಸಮಾಜ ಪರ ನಿಲುವು ಇದೆ ರೀತಿ ಮುಂದುವರೆಯಲಿ ಎಂದು ನಮ್ಮೂರ ಧ್ವನಿ ಸುದ್ದಿ ವಾಹಿನಿಯಿಂದ ಆಶಿಸುತ್ತೇವೆ.