ನಮ್ಮನೆಯ ಸೂರಿನಲ್ಲೊಂದು ಗುಬ್ಬಿ ಗೂಡು
ಹುಲ್ಲು ಕಡ್ಡಿಗಳಿಂದಲೇ ಅದರ ಗೂಡು
ಗೂಡಿನ ಬಾಗಿಲಲ್ಲಿ ನಿಂತು
ಚಿಂವ್ ಚಿಂವ್ ಅನ್ನುವ ಹಾಡು
ಕೇಳಲು ಬಲು ಸೊಗಸು
ಕಾಣಲು ಅತಿ ಸೊಬಗು
ದಿನವೂ ನಾನು ನೋಡುತಲ್ಲಿದ್ದೆ
ಅದರ ಹಾಡು ಕೇಳುತ್ತಲಿದ್ದೆ
ಮೊಟ್ಟೆ ಇಟ್ಟು ಮರಿ ಮಾಡಿದೆ
ಕಿಚಿ ಪಿಚಿ ಎನ್ನುವ ಮರಿ ಗುಬ್ಬಿ
ಇನ್ನೇನು ಹಾರಲು ಕಲಿಯುತ್ತಿತ್ತು
ಅಮ್ಮನ ಮಡಿಲಲ್ಲಿ ನಗುತ್ತಿತ್ತು
ರೆಕ್ಕೆ ಬಡಿಯಲೇ ಇಲ್ಲ
ಮೇಲೆ ಹಾರಲೇ ಇಲ್ಲ
ಹಾಗೆ ಉರುಳಿತು ಧರೆಗೆ
ನಿರ್ಜಿವ ಶವಾವಾಗಿ
ಏನಾಯಿತು ಏಕಾಾಯಿತು ಹೀಗೆ
ಅಳುವುದೊಂದೇ ನನಗೀಗ ದಾರಿ
ಅಮ್ಮನವರಿಗೆ ಕೇಳಿದೆ ಏಕೆ ಈ ಪರಿ
ಒಂದೇ ಸಮನೆ ಅಬ್ಬರಿಸಿದಂತೆ
ಮೊಬೈಲ್ನ ತರಂಗ
ಬೆಚ್ಚಿ ಹೃದಯ ಬಡಿಯದೆ ಪ್ರಾಣ ಬಿಟ್ಟವಂತೆ
ಮಣಿಕಂಠ ಎಸ್ ಎಂ ಕುಲಾಲ್
ಮಳಲಿ. ನಗರ, 8ನೇ ತರಗತಿ
ಹೋಲಿ ರೆಡಿಮರ್ ಸ್ಕೂಲ್ ಹೊಸನಗರ