ಯಮಕನಮರ್ಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರಿಂದ 13 ಜನ ಗ್ಯಾಂಬ್ಲರ ಬಂಧನ
ಹುಕ್ಕೇರಿ ಯಮಕನಮರ್ಡಿ ಪೋಲಿಸರ ಕಾರ್ಯಾಚರಣೆಯಿಂದ ಸೋಮವಾರ ತಡರಾತ್ರಿ ಹುಕ್ಕೇರಿ ತಾಲೂಕಿನ ಹೂನೂರ ಗ್ರಾಮದ ರಸ್ತೆ ಬದಿಯಲ್ಲಿ ಜೂಜಾಡುತ್ತಿರುವ ಕರಗುಪ್ಪಿ ಗ್ರಾಮದ 13 ಜನರನ್ನು ಬಂಧಿಸಿದ್ದು ರಾಜಾರೋಷವಾಗಿ ಬೀದಿ ದೀಪದ ಕೇಳಗೆ ಇಸ್ಪೀಟ ಅಡ್ಡೆ ಮೇಲೆ ಯಮಕನಮರ್ಡಿ ಪೋಲಿಸ್ ಇನ್ಸಪೇಕ್ಟರ ಜಾವೇದ ಮುಷಾಫೀರ ಮತ್ತು ಅವರ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಇಸ್ಪಿಟ ಆಡುತ್ತಿದ್ದ ಕರಗುಪ್ಪಿ ಗ್ರಾಮದ ಲಗಮಾ ಜೋರ್ಲಿ, ಮನೋಜ ಪುಂಡೆ, ಸತ್ಯಪ್ಪಾ ಜೋರ್ಲಿ, ರಮೇಶ ನಾಯಿಕ, ಅಜೇಯ ಪೂಜೇರಿ ಸೇರಿ 13 ಜನರ ಬಂಧಿಸಿ ಅವರಿಂದ 23,200 ರೂಪಾಯಿ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಇಂದು ಮಂಗಳವಾರ 10 ಗಂಟೆಗೆ ಒಪ್ಪಿಸಿದ್ದಾರೆ.