ಸಂಕೇಶ್ವರ: ಕೋಳಿ ಸಮುದಾಯದ 37 ಪರ್ಯಾಯ ಜಾತಿ ವಿದ್ಯಾರ್ಥಿಗಳಿಂದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಕೋಳಿ ಸಮುದಾಯದ ಉಪಾಧ್ಯಕ್ಷರಾದ ಕಿಶೋರ ಶಿರಗೆ ಅವರು ತಿಳಿಸಿದರು.
ಚಿಕ್ಕೋಡಿ ವಿಭಾಗ ಕೋಳಿ ಸಮಾಜ ಸಂಘ, ಚಿಕ್ಕೋಡಿ ಮತ್ತು ವ್ಯಾಸ ಮಹರ್ಷಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು.
ಸ್ವ-ವಿವರಗಳೊಂದಿಗೆ ಎರಡು ಭಾವಚಿತ್ರ, ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಜೂ. 30ರ ಒಳಗಾಗಿ ಅಂಚೆ ಮೂಲಕ ಅಥವಾ ನೇರವಾಗಿ ಎಸ್.ಕೆ.ಹೊಳೆಪ್ಪನವರ ತಾಲೂಕು ಪಂಚಾಯಿತಿ ಸಮೀಪ ಬಸವನಗರಕ್ಕೆ ಕಳುಹಿಸಬಹುದು. ಮಾಹಿತಿಗಾಗಿ ಮೊ: 9448863655, 9449107947 ಸಂಪರ್ಕಿಸಿ ಎಂದು ಚಿಕ್ಕೋಡಿ ಜಿಲ್ಲಾ ಕೋಳಿ ಸಮುದಾಯದ ಉಪಾಧ್ಯಕ್ಷರು ಹಾಗೂ ಹುಕ್ಕೇರಿ ತಾಲೂಕಿನ ಅಧ್ಯಕ್ಷರಾದ ಕಿಶೋರ್ ಶಿರಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ