Live Stream

[ytplayer id=’22727′]

| Latest Version 8.0.1 |

Local NewsNational NewsState News

ಅಥಣಿಯ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ

ಅಥಣಿಯ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ

 

ಬೆಳಗಾವಿ: ಅಥಣಿ ಮೋಟಗಿ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮವು ಜನವರಿ ಶುಕ್ರವಾರ ದಿನಾಂಕ 10 ರಿಂದ ಸೋಮವಾರ ದಿನಾಂಕ 13 ರವರೆಗೆ ಜರುಗಲಿದೆ ಎಂದು ಅಥಣಿ ಮೋಟಗಿ ಮಠದ ಶ್ರೀ. ಪ್ರಭುಚನ್ನಬಸವ ಮಹಾಸ್ವಾಮಿಜಿ, ನಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಕಿತ್ತೂರಿನ ಶ್ರೀ. ಮಡಿವಾಳ ರಾಜ ಯೋಗಿಂದ್ರ ಸ್ವಾಮಿಗಳು ಮತ್ತು ಮುದುಗಲ್ಲಿನ ಶ್ರೀ. ಮಹಾಂತ ಸ್ವಾಮಿಗಳು ಹೇಳಿದರು.

ಬೆಳಗಾವಿಯಲ್ಲಿ ಜಂಟಿ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರು ಅಥಣಿಯ ಮೋಟಗಿ ಮಠದ ಶ್ರೀ. ಪ್ರಭು ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗುವ ನಾಲ್ಕು ದಿನಗಳ ಈ ಕಾರ್ಯಕ್ರಮದ ಮೊದಲ ದಿನವಾದ ಶುಕ್ರವಾರ ಮುಂಜಾನೆ 9-00 ಗಂಟೆಗೆ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರುವುದರೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ.ಮಂಗಲಾ ಮೆಟಗುಡ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಮ್ಮಿಗಟ್ಟಿಯ ಶ್ರೀ. ಬಸವಾನಂದ ಸ್ವಾಮಿಗಳು ಮತ್ತು ಹಾರೂಗೇರಿ ಶರಣ ವಿಚಾರವಾಹಿನಿಯ ಶ್ರೀ ಐ.ಆರ್.ಮಠಪತಿ ಉಪಸ್ಥಿತರಿರಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬಸವಚರಿತಾಮೃತ ಪ್ರವಚನ ಮಂಗಲೋತ್ಸವ ಜರುಗಲಿದ್ದು ಸಾನಿಧ್ಯವನ್ನು ಕಲಬುರ್ಗಿ ಶ್ರೀಶೈಲಂ ಜಗದ್ಗುರು ಸಾರಂಗಮಠದ ಡಾ. ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಬಳ್ಳಾರಿ ಹೊಸಪೇಟೆ ಹಾಲಕೇರಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಶ್ರೀ.ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಮತ್ತು ಗುಳೇದಗುಡ್ಡ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಜ. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳಿಗೆ ಗುರುವಂದನ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ಜರುಗಲಿರುವ ಗಡಿನಾಡ ಗಾನಕೋಗಿಲೆ ಸ್ಪರ್ಧೆಯ ಮಹಾಸಂಗಮದ ಅಧ್ಯಕ್ಷತೆಯನ್ನು ಇಳಕಲ್ ಸವದಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಮಹಾಸ್ವಾಮಿಗಳು ವಹಿಸಲಿದ್ದು ನೇತೃತ್ವದಲ್ಲಿ ಸೊನ್ನದ ದಾಸೋಹ ಮಠದ ಡಾ.ಶಿವಾನಂದ ಮಹಾಸ್ವಾಮಿಗಳು, ಗೋಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾ ಸ್ವಾಮಿಗಳು, ವಿಜಯಪುರದ ಷಣ್ಮುಖಾರೂಢ ಮಠದ ಶ್ರೀ.ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು, ವಿಜಯಪುರ ಜ್ಞಾನಯೋಗ ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಬಸವ ಬೆಳವಿಯ ಚರಂತೇಶ್ವರ ಮಠದ ಶ್ರೀ ಶರಣಬಸವ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಪ್ರವಚನ ಮಂಗಳ ನುಡಿಗಳನ್ನು ಮುದುಗಲ್ ತಿಮ್ಮಪೂರ ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿಯವರು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ರಾಜು ಕಾಗೆ , ಮಹೇಂದ್ರ ತಮ್ಮಣ್ಣವರ್, ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಶಾಸಕ ಶಹಜಹಾನ್ ಡೊಂಗರಗಾವ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗುಡೆ ಮತ್ತು ಅಥಣಿಯ ಸದಾಶಿವ್ ಬುಟ್ಟಾಳೆ ಆಗಮಿಸಲಿದ್ದಾರೆ. ದೇಶ ಸಂದರ್ಭದಲ್ಲಿ ಜನಗುವ ವಿಶೇಷ ಸಂಗೀತ ಸುಧೆಯಲ್ಲಿ ಚಲನಚಿತ್ರ ಗಾಯಕಿ ಬೆಂಗಳೂರಿನ ಸುನಿತಾ ಜೋಗಿ, ಕಲಬುರ್ಗಿಯ ಶಿವರುದ್ರಯ್ಯ ಗೌಡಗಾವ ಮತ್ತು ಹುಬ್ಬಳ್ಳಿಯ ಶಂಕರಯ್ಯ ಗುರುಮಠ ಭಾಗವಹಿಸಲಿದ್ದು ಕುಕ್ಕನೂರು ವಿರಕ್ತಮಠದ ಚನ್ನಮಲ್ಲ ಸ್ವಾಮೀಜಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಶನಿವಾರ ದಿನಾಂಕ ೧೧ ರಂದು ಬೆಳಗಿನ 10:30 ಗಂಟೆಗೆ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯಶತಮಾನೋತ್ಸವ ಉದ್ಘಾಟನಾ ಸಮಾರಂಭವು ಸುತ್ತೂರು ಜಗದ್ಗುರು ವೀರ ಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶ್ರೀ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಹಾಮಠದ ಶ್ರೀ. ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಗದುಗಿನ ಜಗದ್ಗುರು ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಜರುಗುವ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದು, ದೆಹಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಹಿಸಲಿದ್ದಾರೆ. ಡಾ. ಸಂತೋಷ ಹಾನಗಲ್ ಸಂಪಾದಕತ್ವದ ಮಹಾತ್ಮರ ಚರಿತಾಮೃತ ಅವಲೋಕನ ಕೃತಿಯ ಲೋಕಾರ್ಪಣೆಯನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ್ ಬೆಲ್ಲದ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಂಕರ್ ಬಿದರಿ ಆಗಮಿಸಲಿದ್ದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ ಆಶಯ ನುಡಿಗಳನ್ನಡಲಿದ್ದಾರೆ. ಇದೇ ಸಂದರ್ಭದಲ್ಲಿ ಲಂಡನ್ ನ ಅಂತರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್. ಮಹಾದೇವಯ್ಯ ಅವರಿಗೆ “ಬಸವಭೂಷಣ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಇದಲ್ಲದೆ “ಸಮಾಜ ಸೇವಾಭೂಷಣ” ಪ್ರಶಸ್ತಿಯನ್ನು ಜಮಖಂಡಿ ಶಾಸಕ ಡಾ ಜಗದೀಶ ಗುಡುಗುಂಟಿಮಠ, ಧಾರವಾಡ ಜೆ ಎಸ್ ಎಸ್ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಅಜಿತ್ ಪ್ರಸಾದ್, ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣ ಶೆಟ್ಟರ್, ಮೈಸೂರಿನ ಬಹು ಭಾಷಾ ವಿದ್ವಾಂಸ ಮಹಾತ್ಮರ ಚರಿತಾಮೃತ ಗ್ರಂಥವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಡಾ, ಚಂದ್ರಶೇಖರಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಬೆಂಗಳೂರಿನ ಉದ್ಯಮಿ ಆನಂದ ತಾಳಿಕೋಟಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು.

ಮಾನ್ವಿಯ ಗಾಯಕ ಅಂಬಯ್ಯ ನುಲಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು ಗ್ರಂಥದಾಸೂಹಿಗಳಾದ ಶಿವಾನಂದ ದಿವಾನಮಳ್ ಮತ್ತು ಕೆ ವನ ಜೋಳ ಉಪಸ್ಥಿತರಿರಲಿದ್ದಾರೆ ಬೆಂಗಳೂರಿನ ಕಲಾ ದೇಗುಲ ಶ್ರೀನಿವಾಸ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೋಟಗಿ ಮಠದ ಪ್ರಾರ್ಥನಾ ಮಂದಿರಕ್ಕೆ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಬಸವ ಮಂಟಪ ಎಂದು ನಾಮಕರಣ ಮಾಡಲಾಗುವುದು ಅದರಂತೆ ಗಡಿ ಭಾಗದ 101 ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಶನಿವಾರ ದಿನಾಂಕ ೧೧ ರಂದು ಸಂಜೆ 6 ಗಂಟೆಗೆ ಸಾಮರಸ್ಯದ ಸಮಾಜೋತ್ಸವ ಕಾರ್ಯಕ್ರಮ ಜರುಗಲಿದೆ ಸಾನಿಧ್ಯವನ್ನು ಶಿವಮೊಗ್ಗ ಆನಂದಪುರಂ ಜಗದ್ಗುರು ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು, ಮಹಾರಾಷ್ಟ್ರ ನಾಂದಣಿಯ ಕ್ಷೇತ್ರ ಜೈನಮಠದ ಜಗದ್ಗುರು ಸ್ವಸ್ತಿ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಮತ್ತು ಉತ್ತರಹಳ್ಳಿ ಅವಧೂತ ಪೀಠದ ಅವಧೂತ ಶ್ರೀ ವಿನಯ ಗುರೂಜಿ ಅವರುಗಳು ಸಾನಿಧ್ಯ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ. ರೇವಣಸಿದ್ದೇಶ್ವರ ಮಹಾಸ್ವಾಮಿಜಿಯವರು “ಭಾವೈಕ್ಯ ಬೆಳದಿಂಗಳು” ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ನೇತೃತ್ವವನ್ನು ಕೌಲಗುಡ್ಡ ಸಂಸ್ಥಾನ ಮಠದ ಶ್ರೀ ಅಮರೇಶ್ವರ ಮಹಾರಾಜರು ಮತ್ತು ಇಳಕಲ್ಲದ ಚಿಂತಕ ಜನಾಬಲಾಲ್ ಹುಸೇನ್ ಕಂದಗಲ್ ಸಾಹೇಬರು ವಹಿಸಲಿದ್ದಾರೆ.

ಮೌಂಟ್ ಅಬು ಬ್ರಹ್ಮಕುಮಾರಿ ಆಶ್ರಮದ ಕಾರ್ಯಕಾರಿ ಸಚಿವ ಬಿ.ಕೆ. ಡಾ. ಮೃತ್ಯುಂಜಯ ಅಣ್ಣನವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ವಹಿಸಲಿದ್ದು ಉದ್ಘಾಟನೆಯನ್ನು ರಾಜ್ಯದ ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಶ್ರೀಮತಿ.ಶಶಿಕಲಾ ಜೊಲ್ಲೆ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ “ಸಮಾಜಸೇವಾ ಭೂಷಣ”ಪ್ರಶಸ್ತಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿ ಮಠ, ವಿಜಯಪುರದ ಡಾ.ಮಹಾಂತೇಶ್ ಬಿರಾದಾರ್, ಮೈಸೂರಿನ ಚಿಂತಕ ಶಂಕರ ದೇವನೂರು, ವಿಜಯಪುರದ ಲೇಖಕ ಡಾ.ಜಿ.ಎಸ್. ಪಾಟೀಲ್, ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ, ಮತ್ತು ಧಾರ್ವಾಡ್ ಪೊಲೀಸ್ ವರಿಷ್ಠಾಧಿಕಾರಿ ಮುರುಗೇಶ ಚೆನ್ನಣ್ಣವರ್ ಮುಂತಾದವರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. ಇದಾದ ನಂತರ ಸಂಗೀತಸಂಭ್ರಮ ಕಾರ್ಯಕ್ರಮ ಜರುಗಲಿದ್ದು ಗಾಯಕರಾದ ಬೆಂಗಳೂರಿನ ನಿರ್ಮಲಾ ಡಿ.ಆರ್‌ ಮತ್ತು ವಿಜಯಪುರದ ವೀರೇಶ್ ವಾಲಿ ಕಾರ್ಯಕ್ರಮ ನೀಡಲಿದ್ದಾರೆ. ನಂತರ ರಾತ್ರಿ 9:30 ಗಂಟೆಗೆ ಬಸವರಾಜ್ ಬೆಂಗೇರಿ ಕಲಾತಂಡದಿಂದ “ಬಸವಣ್ಣನವರು” ನಾಟಕ ಪ್ರದರ್ಶನಗೊಳ್ಳಲಿದೆ.

ರವಿವಾರ ದಿನಾಂಕ 12 ರಂದು ಮುಂಜಾನೆ 10-30 ಗಂಟೆಗೆ ಗಡಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಜರುಗಲಿದೆ ಸಾನಿಧ್ಯವನ್ನು ಭಾಲ್ಕಿಯ ಹಿರೇಮಠ ಸಂಸ್ಥಾನ ಮಠದ ಡಾ. ಬಸವಲಿಂಗ ಪಟ್ಟದೇವರು, ಸಾಣೆಹಳ್ಳಿ ತರಳಬಾಳು ಬೃಹನ್ಮಠದ ಡಾ. ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಮತ್ತು ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ ಮಹೇಶ್ ಜೋಶಿ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡ ಶಾಸಕ ಅರವಿಂದ್ ಬೆಲ್ಲದ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಮಾಜಿ ಸಚಿವ ಮುರುಗೇಶ ನೀರಾಣಿ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಮತ್ತು ಯುವಧುರೀಣ ರಾಹುಲ್ ಜಾರಕಿಹೊಳಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ “ಸಮಾಜ ಸೇವಾಭೂಷಣ” ಪ್ರಶಸ್ತಿಯನ್ನು ಬೆಂಗಳೂರಿನ ಪುಸ್ತಕ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ, ಧಾರವಾಡ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ, ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಕೆ.ಎಲ್. ರಾಜಶೇಖರ, ಬೆಂಗಳೂರಿನ ಕನ್ನಡ ಸಂಘಟಕ ಪಾಲನೆತ್ರ, ಬೆಂಗಳೂರಿನ ಖ್ಯಾತ ಮುದ್ರಕ ಸ್ವ್ಯಾನ್ ಕೃಷ್ಣಮೂರ್ತಿ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು. “ಅಥಣಿಶ ಅಂಕಿತ ಪುಸ್ತಕ ಪ್ರಶಸ್ತಿ”ಯನ್ನು ಧಾರವಾಡ ಭೂಮಿ ಪ್ರತಿಷ್ಠಾನದ ಡಾ. ಶಿವಾನಂದ ಟವಳಿ ಅವರಿಗೆ ಪ್ರಧಾನ ಮಾಡಲಾಗುವುದು. ಇದರೊಂದಿಗೆ “ಅನುಭಾವ ಬಾಗಿನ” ಧ್ವನಿ ಸಾಂದ್ರಿಕೆ ಸಮಾಜರ್ಪನೆಗೊಳ್ಳಲಿದೆ. ಇದಾದ ನಂತರ ಸಂಗೀತ ಕಾರ್ಯಕ್ರಮ ಜರುಗಲಿದ್ದು ಕಲಬುರ್ಗಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಫಕೀರೇಶ ಕಣವಿ, ಖ್ಯಾತ ಗಾಯಕರಾದ ಕುಮಾರ್ ಕಣವಿ ಮತ್ತು ಮಾಲಾಶ್ರೀ ಕಣವಿ ಭಾಗವಹಿಸಲಿದ್ದು ಪಂಚಾಕ್ಷರಿ ಕಣವಿ ತಬಲಾ ಸಾಥ್ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಗಡಿ ಕನ್ನಡ ಅಸ್ಮಿತೆ ಮತ್ತು ಸಮನ್ವಯತೆ ವಿಷಯದ ಕುರಿತು “ಗಡಿ ನುಡಿ” ಮೊದಲ ಗೋಷ್ಠಿ ನಡೆಯಲಿದ್ದು ಸಾನಿಧ್ಯವನ್ನು ಹಂದಿಗುಂದದ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮತ್ತು ಚಿಕ್ಕಮಗಳೂರು ಬಸವ ತತ್ವ ಪೀಠದ ಶ್ರೀ. ಬಸವ ಮರುಳಸಿದ್ದ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಅಥಣಿ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ್ ವಹಿಸಲಿದ್ದಾರೆ. ವಿಷಯವನ್ನು ಸಂಶೋಧಕ ಡಾ.ವಿ.ಎಸ್.ಮಾಳಿ ಮಂಡಿಸಲಿದ್ದು ಗಡಿ “ಕನ್ನಡಿಗರ ಸಮಸ್ಯೆಗಳು”ವಿಷಯದ ಕುರಿತು ಡಾ.ಗುರುಲಿಂಗಪ್ಪ ದಬಾಲೆ ಮಾತನಾಡಲಿದ್ದಾರೆ.

ಮಧ್ಯಾಹ್ನ 3:30 ಗಂಟೆಯಿಂದ ಐದು ಗಂಟೆಯವರೆಗೆ ಅಥಣಿಶರ ಸಾಹಿತ್ಯ ಅವಲೋಕನ ವಿಷಯದ ಕುರಿತು ಎರಡನೇ ಗೋಷ್ಠಿ ಜರುಗಲಿದ್ದು ಸಾನಿಧ್ಯವನ್ನು ಹುಕ್ಕೇರಿಯ ಗುರು ಶಾಂತೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಸವಣೂರು ದೊಡ್ಡ ಹುಣಸೆ ಕಲ್ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಮತ್ತು ಮೈಸೂರು ಕಂದೂರು ಮಠದ ಡಾ.ಶರಶ್ಚಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅತಿಥಿಗಳಾಗಿ ಸಾಹಿತಿ ಡಾ. ಗುರುಪಾದ ಮರೆಗುದ್ದಿ ಮತ್ತು ಮಾಜಿ ಶಾಸಕ ಪಿ ರಾಜೀವ ಆಗಮಿಸಲಿದ್ದಾರೆ. ಅಥಣಿಶ ವಿರಚಿತ ಮಹಾತ್ಮರ ಚರಿತಾಮ್ರತ ವಿಷಯವನ್ನು ಕಲಬುರ್ಗಿಯ ವಿದ್ವಾಂಸ ಡಾ. ಕಲ್ಯಾಣರಾವ್ ಪಾಟೀಲ್, ಅಥಣಿಶರ ಕಾವ್ಯ ವಿಷಯವನ್ನು ಬೆಂಗಳೂರಿನ ಲೇಖಕ ರಾಜಶೇಖರ ಮಠಪತಿ ಮತ್ತು ಅಥಣಿಶರ ವಚನಗಳು ಕುರಿತ ವಿಷಯವನ್ನು ಮಹಾಲಿಂಗಪುರದ ಉಪನ್ಯಾಸಕ ಡಾ. ಅಶೋಕ ನರೋಡೆ ಮಂಡಿಸಲಿದ್ದಾರೆ.
ಸಂಜೆ 6 ಗಂಟೆಗೆ ಗಡಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸಾನಿಧ್ಯವನ್ನು ಹುಬ್ಬಳ್ಳಿ ಜ.ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳು, ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ. ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ, ಘಟಪ್ರಭಾತ ಅನ್ನದಾನೇಶ್ವರ ಸಂಸ್ಥಾನ ಮಠ ಮುಂಡರಗಿಯ ಶ್ರೀ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗೋಕಾಕ್ ಶೂನ್ಯ ಸಂಸ್ಥಾನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಚಿತ್ರದುರ್ಗ ಮುರುಗಾ ಮಠದ ಶ್ರೀ. ಬಸವ ಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಹಿರಿಯ ಜನಪ್ರತಿನಿಧಿ ಬೆಳಗಿಯ ಎಸ್ ಆರ್ ಪಾಟೀಲ್ , ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆಗಮಿಸಲಿದ್ದು, ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸದಲಕ ಶಾಸಕ ಗಣೇಶ್ ಹುಕ್ಕೇರಿ, ಚಿತ್ರನಟ ಮುಖ್ಯಮಂತ್ರಿ ಚಂದ್ರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬೈರಮಂಗಲ ರಾಮೇಗೌಡ, ಡಾ. ಬಾಳಾ ಸಾಹೇಬ್ ಲೋಕಾಪುರ್, ಬೆಂಗಳೂರಿನ ಲೇಖಕ ಡಾ. ಸಂತೋಷ ಹಾನಗಲ್, ಚಿಕ್ಕೋಡಿಯ ಸಮಾಜ ಸೇವಕ ಜಗದೀಶ್ ಕವಟಗಿಮಠ, ಬೆಂಗಳೂರಿನ ಬಸವರಾಜಣ್ಣ ಮತ್ತು ಬೆಳಗಾವಿಯ ಸಾಹಿತಿ ಪ್ರಕಾಶ್ ಗಿರಿಮಲ್ಲನವರ್ ಅವರುಗಳಿಗೆ ಸಮಾಜ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾತ್ರಿ 8 ಗಂಟೆಗೆ ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿದ್ದು ನೇತೃತ್ವವನ್ನು ಕಮತೆಗೆಯ ಹುಚ್ಚೇಶ್ವರ ಸಂಸ್ಥಾನ ಮಠದ ಶ್ರೀ. ಹುಚ್ಚೇಶ್ವರ ಮಹಾಸ್ವಾಮಿಗಳು , ಮಡಕವಾಡ ದೇವ ಮಂದಿರಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಕಕಮರಿ ರಾಯ ಲಿಂಗೇಶ್ವರಮಠದ ಶ್ರೀ ಅಭಿನವ ಗುರುಲಿಂಗ ಜಂಗಮಮಹಾರಾಜರು, ನಂದಗಾವ ಭೂಕೈಲಾಸ ಮಂದಿರದ ಶ್ರೀ ಮಹದೇವ ಮಹಾರಾಜರು ಮತ್ತು ಗುಣದಾಳ ಹಿರೇಮಠದ ಶ್ರೀ ವಿವೇಕದೇವರು ವಹಿಸಲಿದ್ದಾರೆ. ಸಿಂಧು ಸಂಗೀತ ಬಳಗದ ಶ್ರೀಮತಿ ಕಲಾವತಿ ದಯಾನಂದ ಮತ್ತು ಉಡುಪಿ ಕಲಾತಂಡದ ಮಿಮಿಕ್ರಿ ಕಲಾವಿದ ಗೋಪಿ ಹಾಗೂ ಜೀ ಕನ್ನಡ ಸರಿಗಮಪ ಗಾಯಕ ರಮೇಶ್ ಲಮಾಣಿ ಹಾಗೂ ಹಾಸ್ಯ ಕಲಾವಿದ ಪ್ರವೀಣ್ ಗಸ್ತಿ-ವಾಣಿಶ್ರೀ ಭಾಗವಹಿಸಲಿದ್ದಾರೆ. ರಾತ್ರಿ 9:30 ಗಂಟೆಗೆ ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರದರ್ಶನಗೊಳ್ಳಲಿದೆ. ಸೋಮವಾರ ದಿನಾಂಕ 13 ರಂದು ಮುಂಜಾನೆ 9:30 ಗಂಟೆಗೆ ಧರ್ಮಗುರು ಬಸವದಿ ಬ್ರಹ್ಮತರ ಭಾವಚಿತ್ರ ಧರ್ಮ ಗ್ರಂಥ ವಚನ ಸಾಹಿತ್ಯ ಮತ್ತು ಶ್ರೀ ಗುರು ಚನ್ನಬಸವ ಶಿವಯೋಗಿಗಳವರ ಭಾವಚಿತ್ರ ಗಳನ್ನು ಊರ ಪ್ರಮುಖ ಬೀದಿಗಳಲ್ಲಿ ವಚನ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6-30 ಗಂಟೆಗೆ ಅಥಣಿಶರ ಸಮಾಜ ಸೇವಾ ಕಾಯಕದ ಬೆಳ್ಳಿಹಬ್ಬ ಕಾರ್ಯಕ್ರಮ ಜರುಗಲಿದ್ದು ಸಾನಿಧ್ಯವನ್ನು ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಶ್ರೀ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ನಾಲವಾರ ಕೋರಿ ಸಿದ್ದೇಶ್ವರ ಸಂಸ್ಥಾನ ಮಠದ ಸಿದ್ಧ ತೊಂಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮುಗಳಖೋಡ ಸದ್ಗುರು ಯಲ್ಲಾಲಿಂಗೇಶ್ವರ ಮಠದ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೈಲೂರು ತೋಂಟದಾರ್ಯಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ವಯಸ್ಸಲ್ಲಿದ್ದು, ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಮಹಾಸ್ವಾಮಿಗಳು ಅಭಿನಂದನ ನುಡಿಗಳನ್ನು ಆಡಲಿದ್ದಾರೆ. ಮಿತ್ರತ್ವವನ್ನು ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಶ್ರೀ ದಾನೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಚಿವೆ ಶ್ರೀಮತಿ.ಲಕ್ಷ್ಮಿ ಹೆಬ್ಬಾಳಕರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ್, ಆನಂದ ನ್ಯಾಮಗೌಡ, ಬೆಂಗಳೂರಿನ ಪ್ರವೀಣ ಶೆಟ್ಟರು, ಅಥಣಿಯ ಗಜಾನನ ಮಂಗಸೂಳಿ ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಸವರಾಜ ಪಾಟೀಲ್, ಶ್ರೀಮತಿ ಬನಶಂಕರಿ, ಸಾಂಗ್ಲಿಯ ವೈದ್ಯ ಡಾ. ಎಸ್ ಎ ಕುಲ್ಲೋಳಿ, ಮಾಜಿ ಶಾಸಕ ಕಲ್ಲಪ್ಪ ಮಗಣ್ಣವರ್, ಶಹಪುರ್ ಬಸವ ಮಾರ್ಗದ ವಿಶ್ವರಾಧ್ಯ ಸತ್ಯಂಪೇಟೆ, ಬೆಳಗಾವಿಯ ಡಾ.ರವಿ ಪಾಟೀಲ್, ಧಾರವಾಡದ ಶ್ರೀಮತಿ ದಯಾಶೀಲ, ಯಾದಗಿರಿಯ ಡಾ.ಸಿದ್ದರಾಜ ರೆಡ್ಡಿ, ಬಸವನ ಬಾಗೇವಾಡಿಯ ಡಾ. ಅಮರೇಶ ಮಿಣಜಗಿ, ದೆಹಲಿ ಕುಮಾರೇಶ್ವರ ಸೇವಾ ಪ್ರತಿಷ್ಠಾನದ ಶ್ರೀಕಂಠ ಚೌಕಿಮಠ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ರತಿಕಾ ನೃತ್ಯಾಲಯದ ಶ್ರೀಮತಿ ನಾಗರತ್ನ ಹಡಲಗಿ ಮತ್ತು ಜೇವರ್ಗಿಯ ಸಾಹಿತಿ ಸದಾನಂದ ಪಾಟೀಲ್ ಅವರುಗಳಿಗೆ ಸಮಾಜ ಸೇವಾಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ರಾತ್ರಿ 8 ಗಂಟೆಗೆ “ಗಡಿಯ ಗುಡಿಯೊಳಗೆ ಕರುನಾಡ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮ ಜರುಗಲಿದ್ದು ಸಂಗೀತ ಸುಧೆಯಲ್ಲಿ ಖ್ಯಾತ ಗಾಯಕರಾದ ಬೆಂಗಳೂರಿನ ರವೀಂದ್ರ ಸೋರಗಾವಿ, ಗದಗಿನ ವೆಂಕಟೇಶ್ ಆಲ್ಕೋಡ, ಕಲಬುರ್ಗಿಯ ಸಂಗಮೇಶ್ ಪಾಟೀಲ್, ವಿಜಯಪುರದ ವೀರೇಶ್ ವಾಲಿ, ಕಲರ್ಸ್ ಕನ್ನಡ ವಾಹಿನಿಯ ಕಾಶಿಮ್ ಅಲಿ ಮತ್ತು ಸಮನ್ವಿ ರೈ, ಮಹಾನ್ಯ ಗುರು ಪಾಟೀಲ್ ಕಾರ್ಯಕ್ರಮ ನೀಡಲಿದ್ದಾರೆ. ನಗೆ ನಂದನ ಕಾರ್ಯಕ್ರಮ ಬೆಂಗಳೂರಿನ ಶ್ರೀಮತಿ ಇಂದುಮತಿ ಸಾಲಿಮಠ, ದೇಸಿ ಹಾಡು ಹಬ್ಬ ಕಾರ್ಯಕ್ರಮವನ್ನು ಕೋತಬಾಳದ ಅರುಣೋದಯ ಕಲಾತಂಡ ನಡೆಸಿಕೊಡಲಿದೆ ನೃತ್ಯರೂಪವನ್ನು ಹಾವೇರಿಯ ಪೃಥ್ವಿ ನಡೆಸಿಕೊಡಲಿದ್ದಾರೆ, ಕೊಪ್ಪಳದ ರಾಮಚಂದ್ರ ಉಪ್ಪಾರ್ ಕೀಬೋರ್ಡ್ ಸಾಥ ನೀಡಿದರೆ ಗದಗಿನ ಬಸವರಾಜ ಹೊನ್ನಿಗನೂರ್ ತಬಲಾಸಾಥ ನೀಡಲಿದ್ದಾರೆ. ರಾತ್ರಿ 9:30 ಗಂಟೆಗೆ “ಶರಣ ಸತಿ ಲಿಂಗಪತಿ” ನಾಟಕ ಪ್ರದರ್ಶನ ಗೊಳ್ಳಲಿದೆ ಎಂದವರು ನಾಲ್ಕೂ ದಿನಗಳ ಕಾರ್ಯಕ್ರಮಗಳ ವಿವರವನ್ನು ನೀಡಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";